ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಮನೆಯಲ್ಲಿ ಬೆಡ್ ಕೆಳಗೆ ಬಾಲೆಯನ್ನು ಬಚ್ಚಿಟ್ಟ ದುರುಳರು! ಮನೆಗೆಲಸದಲ್ಲಿದ್ದ ಬಾಲಕಿಗೆ 6 ವರ್ಷ ನರಕ ದರ್ಶನ

ಗುವಾಹಟಿ: ಕಳೆದ 6 ವರ್ಷಗಳಿಂದ ಮನೆಯೊಂದರಲ್ಲಿ ಗುಲಾಮಗಿರಿಯ ಬದುಕನ್ನು ತಳ್ಳುತ್ತಿದ್ದ 13 ವರ್ಷದ ಬಾಲಕಿಯನ್ನು ಅಧಿಕಾರಿಗಳು ಸಿನಿಮಾ ಶೈಲಿಯಲ್ಲಿ ದಾಳಿ ನಡೆಸಿ ರಕ್ಷಿಸಿದ್ದಾರೆ. ಅಸ್ಸಾಂನ ಗುವಾಹಟಿಯ ಪಂಜಾಬರಿ ಎಂಬಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಫೆಬ್ರವರಿ 2, 2026 ರಂದು ನಡೆದ ಈ ಕಾರ್ಯಾಚರಣೆಯ ವಿಡಿಯೋ ಈಗ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ಅಧಿಕಾರಿಗಳು ಮನೆಯೊಳಗೆ ಪ್ರವೇಶಿಸಿ ಪರಿಶೀಲನೆ ನಡೆಸುತ್ತಿದ್ದಾಗ, ಅಮ್ರಿನ್ ಅಖ್ತರ್ ಲಷ್ಕರ್ ಎಂಬಾಕೆ ಬಾಲಕಿಯನ್ನು ರಕ್ಷಿಸಲು ಪ್ಲಾನ್ ಮಾಡಿ ಬೆಡ್‌ನ ಕೆಳಗಿರುವ 'ದಿವಾನ್ ಬಾಕ್ಸ್' (ಸ್ಟೋರೇಜ್ ಬಾಕ್ಸ್) ಒಳಗೆ ಬಟ್ಟೆಗಳ ನಡುವೆ ಆಕೆಯನ್ನು ಬಚ್ಚಿಟ್ಟಿದ್ದಾಳೆ.

ಅಧಿಕಾರಿಗಳು ಈ ಪೆಟ್ಟಿಗೆಯನ್ನು ತೆರೆದಾಗ, ಭಯದಿಂದ ಮುದುಡಿ ಕುಳಿತಿದ್ದ ಬಾಲಕಿ ಪತ್ತೆಯಾಗಿದ್ದಾಳೆ. ದಶಕದ ಅರ್ಧಭಾಗವನ್ನು ಮನೆಯ ಕೆಲಸದಲ್ಲೇ ಕಳೆದಿರುವ ಈ ಬಾಲಕಿಯು ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದೆ. ಈ ಘಟನೆಯು ದೇಶದಲ್ಲಿ ಬೇರೂರಿರುವ ಬಾಲ ಕಾರ್ಮಿಕ ಪದ್ಧತಿಯ ಭೀಭತ್ಸ ರೂಪವನ್ನು ಎತ್ತಿ ತೋರಿಸಿದೆ.

ಬಾಲಕಿಯ ಮೇಲಾಗುತ್ತಿದ್ದ ಕಿರುಕುಳದ ಬಗ್ಗೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ಮತ್ತು ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಸದ್ಯ ಬಾಲಕಿಯನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಮತ್ತು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ.

Edited By : Nagaraj Tulugeri
PublicNext

PublicNext

03/02/2026 09:27 pm

Cinque Terre

10.38 K

Cinque Terre

1

ಸಂಬಂಧಿತ ಸುದ್ದಿ