ಮೆಕ್ಸಿಕೋ: ವಾಹನ ಚಾಲನೆ ಮಾಡುವಾಗ ಮಾಡುವ ಒಂದು ಸಣ್ಣ ತಪ್ಪು ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಭೀಕರ ಅಪಘಾತವೇ ಸಾಕ್ಷಿ. ಮೆಕ್ಸಿಕೋ ಹೆದ್ದಾರಿಯಲ್ಲಿ ಸಂಭವಿಸಿದ ಈ ಘಟನೆಯ 47 ಸೆಕೆಂಡುಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಚಾಲಕನೊಬ್ಬ ತನ್ನ ಕಾರಿನ ಬಾನೆಟ್ ತೆರೆದಿದ್ದಕ್ಕೆ ಹೆದ್ದಾರಿಯ ನಡುವೆಯೇ ದಿಢೀರನೆ ಕಾರನ್ನು ನಿಲ್ಲಿಸುತ್ತಾನೆ. ಆದರೆ, ಆತ ಕಾರನ್ನು ರಸ್ತೆಯ ಬದಿಗೆ ಸರಿಸುವುದಾಗಲಿ ಅಥವಾ ಎಮರ್ಜೆನ್ಸಿ ಸಿಗ್ನಲ್ (Hazards) ಹಾಕುವುದಾಗಲಿ ಮಾಡುವುದಿಲ್ಲ. ಇದೇ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರ್‌ನಲ್ಲಿದ್ದ ವ್ಯಕ್ತಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇಡೀ ವಿಶ್ವದಲ್ಲಿ ಸಂಭವಿಸುವ ಭೀಕರ ಅಪಘಾತಗಳಲ್ಲಿ 20% ರಿಂದ 30%ರಷ್ಟು ಅಪಘಾತಗಳು ಇಂತಹ ಅಜಾಗರೂಕತೆಯಿಂದ ಅಥವಾ ರಸ್ತೆಯ ಮಧ್ಯೆ ಅಸಮರ್ಪಕವಾಗಿ ವಾಹನ ನಿಲ್ಲಿಸುವುದರಿಂದಲೇ ಸಂಭವಿಸುತ್ತವೆ.
PublicNext
03/02/2026 07:12 pm
LOADING...