ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ : ಜಾತಕ ದೋಷದ ಹೆಸರಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರ್ಚಕ ಬಂಧನ

ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಜಾತಕ ದೋಷ ನಿವಾರಣೆಯ ನೆಪದಲ್ಲಿ ಅರ್ಚಕನೊಬ್ಬ ಯುವತಿಯ ಮೇಲೆ ಸತತವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣರಾವ್ ಎಂಬಾತನೇ ಈ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ.

ಸಂತ್ರಸ್ತ ಯುವತಿಯು ತನ್ನ ಮದುವೆಯ ಜಾತಕ ತೋರಿಸಲು ಹೋದಾಗ, ಜಾತಕದಲ್ಲಿ ದೋಷವಿದೆ ಮತ್ತು ಅದನ್ನು ಸರಿಪಡಿಸಲು 'ತಡೆ' ಹೊಡೆಯಬೇಕು ಎಂದು ನಂಬಿಸಿದ ಅರ್ಚಕ, 2025ರ ನವೆಂಬರ್ 23 ರಿಂದ 2026ರ ಫೆಬ್ರವರಿ 2ರ ಅವಧಿಯಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ನೊಂದ ಯುವತಿಯು ನೀಡಿದ ದೂರಿನ ಮೇರೆಗೆ ಬಣಕಲ್ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಕೃಷ್ಣರಾವ್‌ನನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

Edited By :
PublicNext

PublicNext

04/02/2026 02:20 pm

Cinque Terre

3.22 K

Cinque Terre

0

ಸಂಬಂಧಿತ ಸುದ್ದಿ