ಬಳ್ಳಾರಿ: ವಿಶ್ವ ಪ್ರಸಿದ್ಧ ಐತಿಹಾಸಿಕ ತಾಣ ಹಂಪಿಯಲ್ಲಿ ಹೋಳಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಯಿತು. ದೇಶದ ವಿವಿಧ ಭಾಗಗಳಿಂದ ಬಂದ ಪ್ರವಾಸಿಗರು ಸೇರಿದಂತೆ ವಿದೇಶಿ ಪ್ರವಾಸಿಗರೂ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮ ಹೆಚ್ಚಿಸಿದರು. ಕಲರ್ ಕಲರ್ ಬಣ್ಣಗಳನ್ನು ಎರಚಿಕೊಂಡು ಯುವ ಸಮೂಹ ಹುಚ್ಚೆದ್ದು ಕುಣಿದ ದೃಶ್ಯ ಎಲ್ಲರ ಗಮನ ಸೆಳೆಯಿತು. ಡಿಜೆ ಸಂಗೀತಕ್ಕೆ ತಾಳ ಹಾಕಿ ನೃತ್ಯ ಮಾಡುತ್ತಿದ್ದ ಯುವಕರು ಹಂಪಿಯ ಐತಿಹಾಸಿಕ ಸ್ಮಾರಕಗಳ ನಡುವೆಯೇ ಹಬ್ಬದ ಸಂಭ್ರಮವನ್ನು ಇನ್ನಷ್ಟು ಮೆರುಗುಗೊಳಿಸಿದರು.
ಸ್ನೇಹಿತರು, ಕುಟುಂಬಸ್ಥರು ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಂಪಿಯ ವಾತಾವರಣವೇ ಹಬ್ಬದ ರಂಗಿನಿಂದ ಮಿಂಚುವ ಮೂಲಕ ದೇಶಿ-ವಿದೇಶಿ ಪ್ರವಾಸಿಗರ ಸಂಭ್ರಮದಿಂದ ಕಂಗೊಳಿಸಿತು. ಈ ಬಾರಿಯ ಹೋಳಿ ಹಬ್ಬ ಉತ್ಸಾಹ, ಬಣ್ಣ ಮತ್ತು ನೃತ್ಯಗಳ ಮೂಲಕ ಸ್ಮರಣೀಯವಾಗಿ ಮೂಡಿಬಂತು.
PublicNext
05/03/2026 02:15 pm
LOADING...