ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಕಷ್ಟಗಳ ನಡುವೆಯೂ ‘ಡೆವಿಲ್’ಗೆ 100 ದಿನ – ದರ್ಶನ್ ಗೆಲುವಿನ ಕಥೆ

ಬೆಂಗಳೂರು : ಪ್ರಕಾಶ್ ವೀರ್ ನಿರ್ದೇಶನದಲ್ಲಿ ದರ್ಶನ್ ನಟಿಸಿದ್ದ ‘ಡೆವಿಲ್’ ಸಿನಿಮಾ ಅಭಿಮಾನಿಗಳ ಮನಗೆದ್ದಿದೆ. ಇದೀಗ ಚಿತ್ರವು ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ್ದು, ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ಈ ಸಂತಸದ ವಿಚಾರವನ್ನು ಹಂಚಿಕೊಂಡಿದೆ. ಸ್ವತಃ ನಿರ್ದೇಶಕ ಪ್ರಕಾಶ್ ವೀರ್ ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರೀಕರಣದ ಮಧ್ಯೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದು, ಕೆಲಕಾಲ ಸಿನಿಮಾ ನಿಂತಿತ್ತು. ಜಾಮೀನು ಪಡೆದು ಹೊರಬಂದ ಬಳಿಕ, ಆರೋಗ್ಯ ಸಮಸ್ಯೆಯ ನಡುವೆಯೂ ಅವರು ಚಿತ್ರೀಕರಣ ಪೂರ್ಣಗೊಳಿಸಿದರು. ನಂತರ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು.

ದರ್ಶನ್ ಅನುಪಸ್ಥಿತಿಯಲ್ಲೇ ಬಿಡುಗಡೆಯಾದ ಈ ಚಿತ್ರಕ್ಕೆ ಕುಟುಂಬ ಮತ್ತು ಅಭಿಮಾನಿಗಳ ಬೆಂಬಲ ದೊರಕಿತು. ದ್ವಿಪಾತ್ರದಲ್ಲಿ ಕಾಣಿಸಿಕೊಂಡ ದರ್ಶನ್ ಅಭಿನಯ ವಿಶೇಷವಾಗಿ ಮೆಚ್ಚುಗೆ ಪಡೆದಿದೆ. ಇದೀಗ 100 ದಿನ ಪೂರೈಸಿರುವುದು ಚಿತ್ರತಂಡಕ್ಕೆ ದೊಡ್ಡ ಸಾಧನೆಯಾಗಿದೆ.

Edited By :
PublicNext

PublicNext

21/03/2026 06:15 pm

Cinque Terre

48.66 K

Cinque Terre

2