ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​'ಧುರಂಧರ್ - ದಿ ರಿವೆಂಜ್': ಕೇವಲ ಸೀಕ್ವೆಲ್ ಅಲ್ಲ, ಇದೊಂದು ಪವರ್‌ಫುಲ್ ಸ್ಟೇಟ್‌ಮೆಂಟ್; ಚಿತ್ರಕ್ಕೆ ಫಿದಾ ಆದ ರಿಷಬ್ ಶೆಟ್ಟಿ

​ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಬಿಡುಗಡೆಯಾದ ‘ಧುರಂಧರ್ - ದಿ ರಿವೆಂಜ್’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

'ಎಕ್ಸ್' ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ರಿಷಬ್, ಚಿತ್ರದ ತಾಂತ್ರಿಕ ಗುಣಮಟ್ಟ ಮತ್ತು ಅದ್ಭುತ ತಾರಾಗಣದ ಬಗ್ಗೆ ಮೆಚ್ಚುಗೆಯ ಸುರಿಮಳೆಗರೆದಿದ್ದಾರೆ.

​​ರಿಷಬ್ ಶೆಟ್ಟಿ ಅವರ ಪ್ರಕಾರ, ಚಿತ್ರದ ಮೊದಲ ದೃಶ್ಯವೇ ಪ್ರೇಕ್ಷಕರನ್ನು ಕಥೆಯೊಳಗೆ ಸೆಳೆದುಕೊಳ್ಳುತ್ತದೆ. "ಪ್ರತಿಯೊಂದು ಫ್ರೇಮ್ ಕೂಡ ಯುದ್ಧದ ನಗಾರಿಯಂತೆ (War Drum) ಪರಿಣಾಮಕಾರಿಯಾಗಿದೆ" ಎಂದು ಅವರು ಬಣ್ಣಿಸಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರ ಕಥೆ ಹೇಳುವ ಶೈಲಿ ಮತ್ತು ಚಿತ್ರದ ಸಣ್ಣ ವಿವರಗಳಿಗೆ (Detailing) ಅವರು ನೀಡಿದ ಪ್ರಾಮುಖ್ಯತೆಯನ್ನು ರಿಷಬ್ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ​​ಚಿತ್ರದ ಯಶಸ್ಸಿನಲ್ಲಿ ಕಲಾವಿದರ ಪಾತ್ರ ದೊಡ್ಡದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್. ಮಾಧವನ್, ಅರ್ಜುನ್ ರಾಂಪಾಲ್, ರಣವೀರ್ ಸಿಂಗ್ ಮತ್ತು ಸಂಜಯ್ ದತ್ ಅವರಂತಹ ಘಟಾನುಘಟಿ ನಟರ 'ಟಾಪ್-ನಾಚ್' ಪ್ರದರ್ಶನಕ್ಕೆ ಅವರು ಮನಸೋತಿದ್ದಾರೆ. ಯುವ ಪ್ರತಿಭೆ ಸಾರಾ ಅರ್ಜುನ್ ಅವರ ಅಭಿನಯವೂ ಗಮನಾರ್ಹವಾಗಿದೆ ಎಂದಿದ್ದಾರೆ.

​ವಿಕಾಸ್ ನೌಲಖಾ ಅವರ Spectacular ದೃಶ್ಯಗಳು ಮತ್ತು ಶಾಶ್ವತ್ ಸಚ್‌ದೇವ್ ಅವರ ಹಿನ್ನೆಲೆ ಸಂಗೀತ ಚಿತ್ರದ ತೀವ್ರತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಶಿವಕುಮಾರ್ ವಿ. ಪಾಣಿಕ್ಕರ್ ಅವರ ಚುರುಕಾದ ಸಂಕಲನವು ಚಿತ್ರವನ್ನು ಅತ್ಯಂತ ಶಕ್ತಿಯುತವಾಗಿ ಮೂಡಲು ನೆರವಾಗಿದೆ ಎಂದು ರಿಷಬ್ ಶೆಟ್ಟಿ ಶ್ಲಾಘಿಸಿದ್ದಾರೆ.

​​ಒಟ್ಟಾರೆಯಾಗಿ, ಈ ಚಿತ್ರವು ಕೇವಲ ಒಂದು ಫ್ರಾಂಚೈಸಿಯ ಮುಂದುವರಿದ ಭಾಗವಾಗಿರದೆ, ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುವ ಒಂದು ಪ್ರಬಲ 'ಕಲಾಕೃತಿ'ಯಾಗಿದೆ ಎಂದು ರಿಷಬ್ ಬಣ್ಣಿಸಿದ್ದಾರೆ.

Edited By : Vijay Kumar
PublicNext

PublicNext

21/03/2026 10:42 pm

Cinque Terre

8.03 K

Cinque Terre

1