ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂತ ಶ್ರೇಷ್ಠ ಶ್ರೀ ಕೈವಾರ ತಾತಯ್ಯನವರ 300ನೇ ಜಯಂತ್ಯೋತ್ಸವ!

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ಜಿಲ್ಲೆಯ ಪವಿತ್ರ ಭೂಮಿ ಕೈವಾರದಲ್ಲಿ ಇಂದು ಮಹಾನ್ ಕಾಲಜ್ಞಾನಿ, ಸಂತ ಶ್ರೇಷ್ಠ ಶ್ರೀ ಕೈವಾರ ತಾತಯ್ಯನವರ 300ನೇ ಜಯಂತ್ಯೋತ್ಸವ ಹಾಗೂ ರಥೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಮ್ ಅವರ ನೇತೃತ್ವದಲ್ಲಿ ಅದ್ಧೂರಿ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಸಚಿವ ಡಾ. ಎಂ.ಸಿ. ಸುಧಾಕರ್ ಸೇರಿದಂತೆ ಕರ್ನಾಟಕ, ಆಂಧ್ರ, ತಮಿಳುನಾಡಿನಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಇನ್ನೂ ನಿರಂತರ ಸಂಗೀತೋತ್ಸವ ಹಾಗೂ ಭಜನೆ, ರಾತ್ರಿ ಇಡೀ ನಡೆಯುವ ನಾಟಕಗಳು ಎಲ್ಲರನ್ನು ಆಕರ್ಷಣೆ ಮಾಡಿಕೊಂಡಿದ್ದು ಮೂರು ದಿನಗಳ ಕಾಲ ಈ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪಕರು‌ ಮಾಹಿತಿ ನೀಡಿದ್ರು.

Edited By : Somashekar
PublicNext

PublicNext

05/03/2026 03:21 pm

Cinque Terre

10.83 K

Cinque Terre

0