ಬೀದರ್: ಬೀದರ್‌ನ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು ₹1.29 ಲಕ್ಷ ಮೌಲ್ಯದ ಮಾದಕ ವಸ್ತುಗಳ ಜೊತೆಗೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೀದರ್‌ನ ಅಲ್ಲಮಪ್ರಭು ನಗರದ ರಾಕೇಶ್, ಶಾಹಗಂಜ್‌ನ ಉಮರ್, ಮುಲ್ತಾನಿ ಕಾಲನಿಯ ವಾಜೀದ್ ಎಂಬ ಮೂವರ ಹೆಡೆಮುರಿಕಟ್ಟಿದ್ದಾರೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬಂಧಿತ ಮೂವರು ಆರೋಪಿಗಳು ಬೈಕ್‌ನಲ್ಲಿ ಹೈದ್ರಾಬಾದ್‌ನಿಂದ ಬೀದರ್‌ಗೆ ಮಾದಕ ವಸ್ತುಗಳನ್ನ ಸರಬರಾಜು ಮಾಡುತ್ತಿದ್ರು.
ಖಚಿತ ಮಾಹಿತಿ ಮೇರೆಗೆ ಮಾರ್ಕೆಟ್ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಬಂಧಿತರಿಂದ ನಾಲ್ಕೂವರೆ ಸಾವಿರ ಮಾದಕ ಟ್ಯಾಬ್ಲೆಟ್, ನೂರು ಕಾಫ್ ಸೀರಪ್ ಬಾಟಲ್ ಸೇರಿ 1.29 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಬೀದರ್ ಜಿಲ್ಲೆಯಾದ್ಯಂತ ಮಾದಕ ವಸ್ತುಗಳನ್ನು ಸರಬರಾಜು ಮತ್ತು ಮಾರಾಟ ಮಾಡುವವರಿಗೆ ಎಸ್‌ಪಿ ಪ್ರದೀಪ್ ಗುಂಟಿ ಖಡಕ್ ಎಚ್ಚರಿಕೆ ನೀಡಿದ್ದು, ಮಾದಕ ವಸ್ತುಗಳ ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ.
PublicNext
07/03/2026 09:39 am
LOADING...