ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರಸಭೆ ಆವರಣದಲ್ಲಿ ಸಣ್ಣದೊಂದು ಪಾರ್ಕ್ ನಿರ್ಮಾಣ ಮಾಡಲಾಗಿತ್ತು. ಆದರೆ, ಈಗ ಪಾರ್ಕ್ ನಲ್ಲಿದ್ದ ಜಿಮ್ ಉಪಕರಣಗಳು ಅನಾಥವಾಗಿವೆ.
ಪಾರ್ಕ್ ಜಾಗದಲ್ಲಿ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣ ಆಗ್ತಿದ್ದು, ಈ ಹಿನ್ನೆಲೆಯಲ್ಲಿ ಜಿಮ್ ಉಪಕರಣಗಳು ತುಕ್ಕು ಹಿಡಿಯುತ್ತಿವೆ. ಇನ್ನು ಚನ್ನಪಟ್ಟಣ ನಗರದ 31ನೇ ವಾರ್ಡ್ ನಲ್ಲಿನ ಅತ್ಯಾಧುನಿಕ ಪಾರ್ಕ್ ಗೆ ಈ ಉಪಕರಣಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅವಶ್ಯಕತೆ ಇರುವ ಜಾಗಕ್ಕೆ ಅಳವಡಿಸಿ, ಸಾರ್ವಜನಿಕ ಸೇವೆಗೆ ಬಳಸಿ ಎಂದು ಜನರು ಆಗ್ರಹಿಸಿದ್ದಾರೆ.
PublicNext
07/03/2026 10:25 am
LOADING...