ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಥೋತ್ಸವದಲ್ಲಿ ಭೀಕರ ದುರಂತ : ಮೈ ಮೇಲೆ ಹರಿದ ರಥ.. ಮಹಿಳೆಯ 2 ಕಾಲು ಕಟ್

ಕಲಬುರಗಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದ ಶ್ರೀ ಶರಣಬಸವೇಶ್ವರ ರಥೋತ್ಸವದ ವೇಳೆ ಘೋರ ದುರಂತವೊಂದು ಸಂಭವಿಸಿದೆ.ರಥದ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರ ಎರಡು ಕಾಲುಗಳು ಕಟ್‌ ಆಗಿದ್ದು ಸದ್ಯ ಮಹಿಳೆ ಸ್ಥಿತಿ ಗಂಭೀರವಾಗಿದೆ.

ಹೌದು ಶ್ರೀ ಶರಣಬಸವೇಶ್ವರ ರಥೋತ್ಸವದ ಸಂಭ್ರಮದ ನಡುವೆ ನಾಗಮ್ಮ ಯಲಗೋಡ ಎಂಬ ಮಹಿಳೆ ರಥ ಸಾಗುತ್ತಿದ್ದಾಗ ಅದಕ್ಕೆ ನಮಸ್ಕರಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಉಂಟಾದ ಭಾರಿ ನೂಕುನುಗ್ಗಲಿನಲ್ಲಿ ಅವರು ಆಯತಪ್ಪಿ ರಥದ ಚಕ್ರದ ಕೆಳಗೆ ಬಿದ್ದಿದ್ದಾರೆ. ರಥದ ಚಕ್ರ ಅವರ ಎರಡು ಕಾಲುಗಳ ಮೇಲೆ ಹರಿದು, ಕಾಲುಗಳು ಸಂಪೂರ್ಣವಾಗಿ ಛಿದ್ರಗೊಂಡಿವೆ.

ಗಾಯಗೊಂಡ ಮಹಿಳೆಗೆ ಯಡ್ರಾಮಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ದುರದೃಷ್ಟಕರ ಘಟನೆ ಸಂಬಂಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

09/03/2026 11:41 am

Cinque Terre

14.35 K

Cinque Terre

0