ಬೀದರ್ : ಬೀದರ್ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ಐತಿಹಾಸಿಕ ಪುಷ್ಕರಣಿಯನ್ನ ಸ್ವಚ್ಛಗೊಳಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ರೂ, ಕ್ರಮ ಕೈಗೊಳ್ಳದ ಹಿನ್ನೆಲೆ ಗ್ರಾಮಸ್ಥರೇ ಪುಷ್ಕರಣಿ ಸ್ವಚ್ಛಗೊಳಿಸಿದ್ದಾರೆ. ಹುಲಸೂರ ಪಟ್ಟಣದ ವಾರ್ಡ್ ನಂ.3ರಲ್ಲಿ 12ನೇ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರು ಸೋಮನಾಥ ದೇವಾಲಯದ ಪಕ್ಕದಲ್ಲಿ ಪುಷ್ಕರಣಿ ನಿರ್ಮಿಸಿದ್ರು. ಅದೇ ಪುಷ್ಕರಣಿಯಿಂದ ಸುಮಾರು ವರ್ಷಗಳಿಂದ ಅದೆ ಬಾವಿಯಿಂದ ನೀರು ಕುಡಿಯುತ್ತಿದ್ದರು.
ಆದ್ರೆ ಕೆಲ ವರ್ಷಗಳಿಂದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪುಷ್ಕರಣಿ ಹಾಳಾಗುತ್ತಿದ್ದು, ಕುಡಿಯಲು ಯೋಗ್ಯವಾದ ನೀರು ಸಿಗುತ್ತಿರಲಿಲ್ಲ. ಪುಷ್ಕರಣಿ ಸ್ವಚ್ಛಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವಂತೆ ಹುಲಸೂರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದ್ರು. ಆದ್ರೆ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಹಾಗೂ ಭಜರಂಗದಳ ಸದಸ್ಯರು ಪುಷ್ಕರಣಿ ಸ್ವಚ್ಛಗೊಳಿಸಿದ್ದಾರೆ.
Kshetra Samachara
09/03/2026 07:55 pm
LOADING...