ಬೀದರ್ : ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಯನಗುಂದಾ ಗ್ರಾಮದ ಬಳಿ 3 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶಾಸಕ ಪ್ರಭು ಚೌಹಾಣ್ ಭೇಟಿ ನೀಡಿ ಪರಿಶೀಲಿಸಿದ್ರು. ಮಹಾರಾಷ್ಟ್ರ ಗಡಿಯಿಂದ ಚಿಂತಾಕಿ, ಖಾಶೆಂಪೂರ, ಯನಗುಂದಾ, ತೇಗಂಪೂರ, ಮಮದಾಪೂರ, ಔರಾದ್ ಜನರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಕಾಮಗಾರಿ ಅಂದಾಜು ಪತ್ರಿಕೆಯಲ್ಲಿರುವಂತೆ ಸೇತುವೆ ನಿರ್ಮಾಣವಾಗಬೇಕು ಅನ್ನೋ ಆಶಯ ಶಾಸಕ
ರದ್ದು. ಕಬ್ಬಿಣದ ಬಳಕೆ, ಸಿಮೆಂಟ್ ಹಾಗೂ ಮತ್ತಿತರೆ ಸಲಕರಣೆಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಗುಣಮಟ್ಟದ ವಿಷಯದಲ್ಲಿ ಲೋಪಗಳು ಕಾಣಿಸಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲವೆಂದು ಗುತ್ತಿಗೆದಾರರಿಗೆ ಈ ವೇಳೆ ಶಾಸಕರು ಎಚ್ಚರಿಕೆ ನೀಡಿದ ದೃಶ್ಯ ಕಂಡು ಬಂತು.
PublicNext
17/03/2026 11:13 am
LOADING...