ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

“ಬಲೆ ಬಲೆ ಮೀನು…” ಕೂಗಿನಲ್ಲಿ ಗದ್ದಲಗೊಳ್ಳುವ ಮಲ್ಪೆ ಬಂದರಿನ ಮೀನು ಮಾರ್ಕೆಟ್

ಉಡುಪಿ; ಜಿಲ್ಲೆಯ ಪ್ರಸಿದ್ಧ ಮಲ್ಪೆ ಫಿಶಿಂಗ್ ಹಾರ್ಬರ್ ನಲ್ಲಿ ಪ್ರತಿದಿನವೂ ಬೆಳಗಿನ ಜಾವದಿಂದಲೇ ಮೀನುಗಾರರ ಸಂಚಾರ ಜೋರಾಗಿರುತ್ತದೆ. ಸಮುದ್ರದಿಂದ ಬೋಟುಗಳಲ್ಲಿ ತರಲಾದ ತಾಜಾ ಮೀನನ್ನು ಇಲ್ಲಿ ಮೊದಲು ಹರಾಜಿಗೆ ಇಡಲಾಗುತ್ತದೆ.

ಹರಾಜುವಿನಲ್ಲಿ ಮೀನುಗಾರ ಮಹಿಳೆಯರು ಆ ಮೀನನ್ನು ಖರೀದಿ ಮಾಡಿ, ಅಲ್ಲಿಯೇ ತಮ್ಮ ಸಣ್ಣ ವ್ಯಾಪಾರವನ್ನು ಆರಂಭಿಸುತ್ತಾರೆ. “ಬಲೆ ಬಲೆ ಮೀನು… ಫ್ರೆಶ್ ಮೀನು ಕಡಿಮೆ ಮಲ್ತು ಕ್ವೊರ್ಪೆ…” ಎಂದು ಗ್ರಾಹಕರನ್ನು ಕರೆಯುತ್ತಾ ವ್ಯಾಪಾರ ನಡೆಸುವ ಈ ಮಹಿಳೆಯರ ಚಾಕಚಕ್ಯತೆ ನೋಡೋದೇ ಒಂದು ವಿಶೇಷ ಅನುಭವ.

ಇಲ್ಲಿ ಬೆಳಗ್ಗೆ ಮೂರು ಗಂಟೆಯಿಂದಲೇ ಕೆಲಸ ಆರಂಭವಾಗುತ್ತದೆ.ಪಾಂಪ್ಲೆಟ್,

ಬಂಗುಡೆ ,ತಾರ್ಲೆ, ಭೂತಾಯಿ ,

ಅಂಜಲ್,ರಿಬನ್ ಫಿಶ್,ನಂಡು,ಪ್ರಾನ್ಸ್ ಹೀಗೆ ಹಲವು ವಿಧದ ತಾಜಾ ಸಮುದ್ರ ಮೀನುಗಳು ಇಲ್ಲಿ ಲಭ್ಯವಾಗುತ್ತವೆ.

ವಿಶೇಷ ಅಂದ್ರೆ, ಗ್ರಾಹಕರು ಖರೀದಿ ಮಾಡುವ ಮೀನನ್ನು ಬೇಕು ಅಂದ್ರೆ,ಅಲ್ಲಿಯೇ ಸ್ವಚ್ಛವಾಗಿ ಕ್ಲೀನ್ ಮಾಡಿ ಕೊಡುತ್ತಾರೆ.

ತಾಜಾ ಸಮುದ್ರ ಮೀನು ಸಿಗುವ ಕಾರಣದಿಂದ ಉಡುಪಿ ಮಾತ್ರ ಅಲ್ಲ ಹೊರಗಡೆ ಇಂದ ಬಂದ ಜನರು ಇಲ್ಲಿ ಬಂದು ಮೀನ ಖರೀದಿಸುತ್ತಾರೆ.

Edited By :
PublicNext

PublicNext

17/03/2026 11:24 am

Cinque Terre

19.26 K

Cinque Terre

2

ಸಂಬಂಧಿತ ಸುದ್ದಿ