ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ವಿಜೃಂಭಣೆಯ ದೀಪಾರಾಧನೆ

ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಇತಿಹಾಸ ಪ್ರಸಿದ್ಧ ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ತುಡಾರ ಬಲಿ ಉತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕುಬೇರಗುತ್ತು ವಿನಿಂದ ಭಂಡಾರ ಆಗಮನ, ಶ್ರೀ ಮಹಾಗಣಪತಿ ದೇವರ ಅಂಗಾರಕ ಸಂಕಷ್ಟ ಹರ ಚತುರ್ಥಿ ಪ್ರಯುಕ್ತ ಭಜನಾ ಕಾರ್ಯಕ್ರಮ, ಪೂಜಾ ಸೇವೆ, ಬಳಿಕ ದೀಪಾರಾಧನೆ ತುಡಾರ ಬಲಿ ಉತ್ಸವ, ಸಾರ್ವಜನಿಕ ಅನ್ನ ಸಂತರ್ಪಣೆ ದೈವದ ಭಂಡಾರ ನಿರ್ಗಮನ ನಡೆಯಿತು.

ಈ ಸಂದರ್ಭ ವ್ಯಾಸ ಶ್ರೀಮಂತರಾಯ,, ಮುರಳೀಧರ ಭಂಡಾರಿ, ಕರುಣಾಕರ್ ಶೆಟ್ಟಿ ಬಾಳದ ಗುತ್ತು, ಸುಕುಮಾರ ಶೆಟ್ಟಿ ತಾಳಿ ಪಾಡಿಗುತ್ತು, ಸತೀಶ್ ಶೆಟ್ಟಿ ಕೆಂಚನಕೆರೆ, ಶ್ರೀಕಾಂತ್ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಯೋಗ ಗುರು ಜಯ ಮುದ್ದು ಶೆಟ್ಟಿ, ವಿಜಯಕುಮಾರ್, ಕೃಷ್ಣ ಶೆಟ್ಟಿ, ಅಶ್ವಿನ್ ಆಳ್ವ, ಕುಬೆವೂರು, ಶಮೀನ ಆಳ್ವ, ವಿಕಾಸ್ ಶೆಟ್ಟಿ, ಜಯಕುಮಾರ್,ಚಂದ್ರಶೇಖರ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಕಾಶ್ ಶೆಟ್ಟಿ, ಶರತ್ ಕುಬೆವೂರು, ಗೌರೀಶ್ ಶೆಟ್ಟಿ, ನಾರಾಯಣ ರೈ, ನಾಗೇಂದ್ರ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/05/2026 08:52 am

Cinque Terre

550

Cinque Terre

0

ಸಂಬಂಧಿತ ಸುದ್ದಿ