ಬ್ರಹ್ಮಾವರ: ಸ್ಪಂದನ ಯುವ ವೃಂದ ಆರೂರು ಇದರ ದಶ ಸಂಭ್ರಮ ಕಾರ್ಯಕ್ರಮ ಭಾನುವಾರ ಸಂಜೆ ಚೇರ್ಕಾಡಿ ಶಾರದಾ ಪ್ರೌಢ ಶಾಲಾ ವಠಾರದಲ್ಲಿ ನಡೆದಿದ್ದು, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸ್ಪಂದನ ಸಾಧಕ ಪ್ರಶಸ್ತಿಯನ್ನು ಶಿಕ್ಷಣ, ಕ್ರೀಡೆ, ಬ್ಯಾಂಕಿಂಗ್, ಸಾಮಾಜಿಕ, ಧಾರ್ಮಿಕ, ರಂಗಕಲೆ ನಾನಾ ಸಂಘಟನೆಯಲ್ಲಿ ತೊಡಗಿಸಿಕೊಂಡ ರೋಟೆರಿಯನ್ ಆರೂರು ತಿಮ್ಮಪ್ಪ ಶೆಟ್ಟಿಯವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಇನ್ನಿತರ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪರಿಸರದ ಅನೇಕ ಪ್ರತಿಭಾವಂತರನ್ನು ಸಾಧಕರನ್ನು ಸನ್ಮಾನಿಸಲಾಯಿತು. ನೀಲಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ನಾನಾ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಜರುಗಿತು.
ಸಂಘದ ಅಧ್ಯಕ್ಷ ವೀರಪ್ಪ ನಾಯ್ಕ್,ಗೌರವಾಧ್ಯಕ್ಷ ರಾಜೀವ ಕುಲಾಲ್ ಗಣ್ಯರಾದ ಸುಗ್ಗಿ ಸುಧಾಕರ ಶೆಟ್ಟಿ, ಆರೂರು ನಾರಾಯಣ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ರಾಜೇಶ್ ಶೆಟ್ಟಿ ಬಿರ್ತಿ,ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ,ಶ್ರೀಧರ ಶೆಟ್ಟಿ ಆರೂರು,ರತ್ನಾಕರ ಶೆಟ್ಟಿ, ಕುರುಡುಂಜೆ, ಕೆಸಿ ರಾಜೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Kshetra Samachara
04/05/2026 02:23 pm
LOADING...