ಮುಲ್ಕಿ:ಗ್ರಂಥಾಲಯಗಳಿಗೆ ಹೆಚ್ಚು ಹೆಚ್ಚು ಮಂದಿ ಭೇಟಿ ಕೊಟ್ಟು ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚಬೇಕು. ಇಂತಹವರನ್ನು ಉತ್ತೇಜಿಸುವ ಸಾಹಿತ್ಯ ಪರಿಷತ್ತು ಕಾರ್ಯವನ್ನು ಬೆಂಬಲಿಸೋಣ ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಹೇಳಿದರು.
ಅವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗ್ರಂಥಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನದ ಆಚರಣೆಯ ಸಂದರ್ಭ ಮಾತನಾಡಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗ್ರಂಥಾಲಯ ಹಾಗೂ ಮೆನ್ನಬೆಟ್ಟು ಗ್ರಂಥಾಲಯವನ್ನು ಹೆಚ್ಚು ಉಪಯೋಗಿಸುವ ಓದುಗರಿಗೆ ರೂಪಾಯಿ ಒಂದು ಸಾವಿರ ಮೌಲ್ಯದಂತೆ ಪುಸ್ತಕಗಳನ್ನು ವಿತರಿಸಲಾಯಿತು.
ಸಾಹಿತಿ ಉದಯಕುಮಾರ ಹಬ್ಬು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರಣಿಕ್, ಕಸಾಪ ಕಾರ್ಯದರ್ಶಿಗಳಾದ ಹೆರಿಕ್ ಪಾಯಸ್, ಗ್ರಂಥಪಾಲಕರಾದ ಶ್ರೀಮತಿ ರಮಣಿ, ಶಶಿಕಲಾ ಕೆಮ್ಮಡೆ, ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ಮತ್ತಿತರರಿದ್ದರು. ಕಸಾಪ ಕಾರ್ಯದರ್ಶಿ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಪ್ರಕಾಶ್ ಆಚಾರ್ ನಿರೂಪಿಸಿದರು.
Kshetra Samachara
05/05/2026 03:18 pm
LOADING...