ಶಿವಮೊಗ್ಗ: ನಗರದಲ್ಲಿ ಬುಧವಾರ ಸಂಜೆ ವೇಳೆಗೆ ಅಲಿಕಲ್ಲು ಮಳೆಯಾಗಿದೆ. ಗುಡುಗು, ಮಿಂಚು, ಭಾರಿ ಗಾಳಿ ಸಹಿತ ಮಳೆ ಸುರಿದಿದೆ. ಇದರಿಂದ ಶಿವಮೊಗ್ಗ ಸಿಟಿಯ ಹಲವೆಡೆ ಹಾನಿ ಉಂಟಾಗಿದೆ.
ಇನ್ನೊಂದೆಡೆ ಆಲಿಕಲ್ಲು ಬಿದ್ದು ಕಾರುಗಳ ಗಾಜಿಗೆ ಹಾನಿಯಾಗಿದೆ. ದುರ್ಗಿಗುಡಿಯಲ್ಲಿ ನಿಲ್ಲಿಸಿದ್ದ ಕಾರಿನ ಮುಂಭಾಗದ ಗಾಜು ಹಾನಿಯಾಗಿದೆ.
ಶಿವಮೊಗ್ಗ ಸಿಟಿಯಲ್ಲಿ ಜೋರು ಗಾಳಿ ಸಹಿತ ಭಾರಿ ಮಳೆ ಸುರಿಯಿತು. ಕೆಲವು ಹೊತ್ತು ನಿರಂತರ ಮಳೆಯಾಯಿತು. ಇದರ ಬೆನ್ನಿಗೆ ನಗರದ ವಿವಿಧೆಡೆ ಹಾನಿ ಸಂಭವಿಸಿದೆ.
ಗಾಳಿಯ ರಭಸಕ್ಕೆ ನಗರದಾದ್ಯಂತ ಮರ, ಗಿಡಗಳ ಎಲೆಗಳು ಉದುರಿ ರಸ್ತೆ, ಫುಟ್‌ಪಾತ್‌ಗಳ ಮೇಲೆ ಬಿದ್ದಿವೆ. ನಗರ ಹಸಿರುಮಯವಾಗಿದೆ. ರಸ್ತೆ ಮೇಲೆ ವಾಹನಗಳು ಓಡಾಡಿ ಎಲೆಗಳ ವಾಸನೆ ಬರುತ್ತಿದೆ. ಆಲ್ಕೊಳದ ವಿಶಾಲ್ ಮಾರ್ಟ್ ಮುಂಭಾಗ ಮರದಿಂದ ಬಿದ್ದ ಕಾಯಿಗಳಿಂದಾಗಿ ದ್ವಿಚಕ್ರ ವಾಹನ ಸವಾರು ಜಾರಿ ಬೀಳುವಂತಾಗಿತ್ತು.
ಗಾಳಿ ಅಬ್ಬರಕ್ಕೆ ಹಲವೆಡೆ ಮರದ ರೆಂಬೆಗಳು ತುಂಡಾಗಿ ಬಿದ್ದಿವೆ. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮರದ ರೆಂಬೆ ಮುರಿದು ಬಿದ್ದು ಆಟೋ ಜಖಂ ಆಗಿದೆ. ಆಲ್ಕೊಳದ ವಿಶಾಲ್ ಮಾರ್ಟ್ ಸಮೀಪ ದ್ವಿಚಕ್ರ ವಾಹನಗಳ ಮೇಲೆ ರೆಂಬೆ ಬಿದ್ದಿತ್ತು. ನ್ಯೂ ಮಂಡ್ಲಿಯಲ್ಲಿ ಮನೆಯೊಂದರ ಹೆಂಚುಗಳು ಉದುರಿ ಬಿದ್ದಿವೆ.
Kshetra Samachara
19/03/2026 10:48 am
LOADING...