ಹಾಸನ : ನಗರದ ಅರಳೇಪೇಟೆಯಲ್ಲಿರುವ ಎಂ.ಎಚ್. ಕನ್ವೆನ್ಷನ್ ಹಾಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭವೊಂದು ರಣರಂಗವಾಗಿ ಮಾರ್ಪಟ್ಟ ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವು ವಧು ಮತ್ತು ವರನ ಕಡೆಯ ಸಂಬಂಧಿಕರ ನಡುವೆ ಮಾರಾಮಾರಿಗೆ ಕಾರಣವಾಯಿತು. ಕಲ್ಯಾಣ ಮಂಟಪದಲ್ಲಿ ಶುರುವಾದ ಜಗಳ ಅಂತಿಮವಾಗಿ ಮಂಟಪದ ಹೊರಗೆ, ಅಂದರೆ ಸಾರ್ವಜನಿಕ ರಸ್ತೆಯವರೆಗೂ ತಲುಪಿತು.
ಎರಡೂ ಕಡೆಯವರು ಪರಸ್ಪರ ಕೈಕೈ ಮಿಲಾಯಿಸಿಕೊಂಡು ರಸ್ತೆಯಲ್ಲೇ ಬಡಿದಾಡಿಕೊಂಡಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದಾಗಿ ಮದುವೆಗೆ ಬಂದಿದ್ದ ಅತಿಥಿಗಳು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾದರು.
PublicNext
29/03/2026 09:34 pm
LOADING...