ಧಾರವಾಡ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಆ ಕಾರು ನಡು ರಸ್ತೆಯಲ್ಲೇ ಧಗ ಧಗನೇ ಹೊತ್ತಿ ಉರಿದ ಘಟನೆ ಇಟಿಗಟ್ಟಿ ಬಳಿಯ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ.
ಹುಬ್ಬಳ್ಳಿ ಆನಂದನಗರದ ನಿವಾಸಿ ಆಸೀಫ್ ಶೇಖ್ ಎನ್ನುವವರು ಹುಬ್ಬಳ್ಳಿಯಿಂದ ಬೆಳಗಾವಿ ಕಡೆಗೆ ಹೊರಟಿದ್ದರು. ಈ ವೇಳೆ ಕಾರಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲರೂ ಕಾರಿನಿಂದ ಕೆಳಗೆ ಇಳಿದಿದ್ದರಿಂದ ಎಲ್ಲರೂ ಬಚಾವ್ ಆಗಿದ್ದಾರೆ.
ಕ್ಷಣಮಾತ್ರದಲ್ಲಿ ಬೆಂಕಿ ಇಡೀ ಕಾರಿಗೆ ಆವರಿಸಿ ಕಾರು ಧಗ ಧಗನೇ ಹೊತ್ತಿ ಉರಿದಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/03/2026 07:04 pm
LOADING...