ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಗೆ ಬೆಂಕಿ, ಪೆಟ್ರೋಲ್ ಸಂಗ್ರಹ ಅಥವಾ ಗ್ಯಾಸ್ ಸೋರಿಕೆ ಶಂಕೆ, ಮಹಿಳೆಗೆ ಗಂಭೀರ ಗಾಯ..!!

ಧಾರವಾಡ: ತಾಲೂಕಿನ ತಡಕೋಡ ಗ್ರಾಮದಲ್ಲಿ ಮನೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಪೂರ್ಣಿಮಾ ಹಾದಿಮನಿ (35) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪತ್ನಿಗೆ ತಗುಲಿದ ಬೆಂಕಿ ನಂದಿಸಲು ಹೋದ ಪತಿ ಕಲ್ಲಪ್ಪ ಹಾದಿಮನಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.

ಮಾಹಿತಿ ಪ್ರಕಾರ, ಮನೆಯಲ್ಲಿ ಸುಮಾರು 5 ಲೀಟರ್ ಪೆಟ್ರೋಲ್ ಸಂಗ್ರಹಿಸಿದ್ದ ಶಂಕೆ ವ್ಯಕ್ತವಾಗಿದೆ. ಪೆಟ್ರೋಲ್ ದರ ಏರಿಕೆಯಾಗಬಹುದು ಹಾಗೂ ಯುದ್ಧದ ಹಿನ್ನೆಲೆ ಪೆಟ್ರೋಲ್ ಅಭಾವ ಉಂಟಾಗಬಹುದು ಎಂಬ ಆತಂಕದಿಂದ ಸಂಗ್ರಹ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಸಂಗ್ರಹಿಸಿದ್ದ ಪೆಟ್ರೋಲ್‌ಗೆ ಬೆಂಕಿ ತಗುಲಿರುವ ಸಾಧ್ಯತೆಯ ಜೊತೆಗೆ, ಗ್ಯಾಸ್ ಸೋರಿಕೆಯಿಂದ ಬೆಂಕಿ ಹತ್ತಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಆದರೆ ಬೆಂಕಿ ಹತ್ತಿದ ನಿಖರ ಕಾರಣ ತನಿಖೆಯ ಬಳಿಕವೇ ತಿಳಿದುಬರಬೇಕಿದೆ.

ಸ್ಥಳಕ್ಕೆ ಧಾರವಾಡ ತಹಶೀಲ್ದಾರ್ ಹಾಗೂ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸಂತೋಷ್, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/03/2026 04:22 pm

Cinque Terre

48.94 K

Cinque Terre

0

ಸಂಬಂಧಿತ ಸುದ್ದಿ