ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಾಟರ್ ಹೀಟರ್‌ನಿಂದ ನೀರು ಕಾಯಿಸುವವರೇ ಹುಷಾರ್..! ವಿದ್ಯುತ್ ತಗುಲಿ ಮಹಿಳೆ ಸಾವು

ಧಾರವಾಡ: ವಿದ್ಯುತ್ ವಾಟರ್ ಹೀಟರ್‌ನಿಂದ ನೀರು ಕಾಯಿಸುವ ವೇಳೆ ವಿದ್ಯುತ್ ತಗುಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ನಿವೇದಿತಾ (26) ಎಂಬ ಮಹಿಳೆಯೇ ಈ ಘಟನೆಯಲ್ಲಿ ಸಾವನ್ನಪ್ಪಿದವರು.

ಗುರುವಾರ ನೀರು ಕಾಯಿಸಲೆಂದು ವಾಟರ್ ಹೀಟರ್ ಇಟ್ಟಿದ್ದ ನಿವೇದಿತಾ ಅವರು, ನೀರು ಕಾದ ನಂತರ ಕೊಡ ತೆಗೆಯುತ್ತಿದ್ದ ವೇಳೆ ವಿದ್ಯುತ್ ವಾಟರ್ ಹೀಟರ್ ತಾಗಿದೆ. ಇದರಿಂದ ವಿದ್ಯುತ್ ಪ್ರವಹಿಸಿದ್ದು, ನಿವೇದಿತಾ ಸಾವನ್ನಪ್ಪಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/04/2026 07:53 pm

Cinque Terre

63.59 K

Cinque Terre

0

ಸಂಬಂಧಿತ ಸುದ್ದಿ