ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಐಬಿಎಂಆರ್ ದಲ್ಲಿ ಅಂತರವಲಯ ಟೇಬಲ್ ಟೆನ್ನಿಸ್ ಪಂದ್ಯಾವಳಿ ಯಶಸ್ವಿ..!

ಹುಬ್ಬಳ್ಳಿ: ಐಬಿಎಂಆರ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಕರ್ನಾಟಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಎರಡನೇ ಅಂತರವಲಯ ಪುರುಷ ಮತ್ತು ಮಹಿಳಾ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಯಶಸ್ವಿಗೊಳಿಸಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಕ್ರೀಡಾಪಟು ಡಾ. ಇರ್‌ಶಾದ್ ಮಕ್ಕೂಬಾಯಿ ಹಾಗೂ ಡಾ. ಮಹೇಶ್ವರಿ ಉಡುಗಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು IBMR ಸಂಸ್ಥೆಯ ಸಿಇಓ ಡಾ. ಇಜ್ಞೇಶ್ ಸಕ್ರಿ ವಹಿಸಿದರು. ಇನ್ನು ವೇದಿಕೆಯಲ್ಲಿ ಡಾ. ರೇಖಾ ಮಹೇಂದ್ರಕರ, ಡಾ. ಅರುಣ್ ಶೆಟ್ಟಿ, ಡಾ. ಶಂಕರ್ ಚಕ್ರವರ್ತಿ, ಪ್ರೊ. ಯೂನಸ್ ಅಲಿಬಾಯಿ, ಡಾ. ವಿಕ್ರಂ ಕುಲಕರ್ಣಿ, ಪ್ರೊ. ರವಿ ಕಬ್ಬಿಣದ ಹಾಗೂ ಪ್ರೊ. ಸಮೀರ್ ಗುಡಿ. ದೈಹಿಕ ಶಿಕ್ಷಕರಾದ ಭೀಮೇಶ ಹಾಗೂ ಲಕ್ಕಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ಕಲಾ ವಿಭಾಗದ ಮುಖ್ಯಸ್ಥರಾದ ಪ್ರೊ. ಅಣ್ಣಪ್ಪ ಕೊರವರ್ ನೆರವೇರಿಸಿದರು. ವಂದನಾರ್ಪಣೆಯನ್ನು ಪ್ರೊ. ಜ್ಯೋತಿ ಸಲ್ಲಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಅಲೆನಾ ಮತ್ತು ಅರೈನಾ ವಿದ್ಯಾರ್ಥಿನಿಯರು ಸುಂದರವಾಗಿ ನಿರ್ವಹಿಸಿದರು.

ಪಂದ್ಯಾವಳಿಯ ಅಂತಿಮ ಘಟ್ಟದಲ್ಲಿ ಐಬಿಎಂಆರ್ ಮಹಾವಿದ್ಯಾಲಯ ಹಾಗೂ ನೆಹರು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಠಿಣ ಪೈಪೋಟಿ ನಡೆಸಿದರು. ಪುರುಷ ವಿಭಾಗದಲ್ಲಿ ಐಬಿಎಂಆರ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಚಾಂಪಿಯನ್ ಪಟ್ಟಕ್ಕೆ ಏರಿದರು. ಮಹಿಳಾ ವಿಭಾಗದಲ್ಲಿ ನೆಹರು ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಚಾಂಪಿಯನ್ ಆಗಿ ಹೊರಹೊಮ್ಮಿದರು.

Edited By : Abhishek Kamoji
Kshetra Samachara

Kshetra Samachara

03/04/2026 10:14 am

Cinque Terre

73.7 K

Cinque Terre

0

ಸಂಬಂಧಿತ ಸುದ್ದಿ