ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಪ್ರಿಲ್ ಓರಲ್ ಕ್ಯಾನ್ಸರ್ ಜಾಗೃತಿ ಅಭಿಯಾನ: ಎಐ ತಂತ್ರಜ್ಞಾನದಿಂದ‌ ರೋಗ ಪತ್ತೆ ಹಾಗೂ ಚಿಕಿತ್ಸೆ..!

ಹುಬ್ಬಳ್ಳಿ: ಕ್ಯಾನ್ಸರ್ ನಿಜಕ್ಕೂ ಮಾರಕವಾದ ರೋಗ. ಸಣ್ಣದೊಂದು ನಿರ್ಲಕ್ಷ್ಯ, ಆರೋಗ್ಯದ ಮೇಲಿನ ನಿಷ್ಕಾಳಜಿಯಿಂದ‌ ದೊಡ್ಡ ಬೆಲೆ ತೆರಬೇಕಾಗುತ್ತದೆ. ಕ್ಯಾನ್ಸರ್ ಅಂದಾಕ್ಷಣ ನಮಗೆಲ್ಲಾ ಬ್ಲಡ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಅಂದುಕೊಂಡಿದ್ದೇವೆ. ಆದರೆ ಓರಲ್ ಕ್ಯಾನ್ಸರ್ ಬಗ್ಗೆ ನಮಗೆ ಅಷ್ಟೊಂದು ಗೊತ್ತೇ ಇಲ್ಲ. ಬಾಯಿಯ ಕ್ಯಾನ್ಸರ್ ನಿಜಕ್ಕೂ ಮನುಕುಲಕ್ಕೆ ಮಾರಕವಾಗಿದೆ. ಹಾಗಿದ್ದರೇ ಪತ್ತೆ ಮಾಡುವುದು ಹೇಗೆ, ಚಿಕಿತ್ಸೆ ಹೇಗೆ ಎಂಬುವಂತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ..

ಲೇಸರ್ ಚಿಕಿತ್ಸೆ ಹಾಗೂ ಗುಣಮಟ್ಟದ ದಂತ ಚಿಕಿತ್ಸೆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಯಾವಗಲ್ ಪ್ರತಿಷ್ಠಾನದ ನಿರ್ದೇಶಕರು ಹಾಗೂ ಲೇಸರ್ ವೇದಾ ಕೇಂದ್ರದ ಮುಖ್ಯಸ್ಥರಾದ ಡಾ. ಚಂದ್ರಶೇಖರ ಯಾವಗಲ್ ಅವರು ಓರಲ್ ಕ್ಯಾನ್ಸರ್ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಈಗ ಎಐ ತಂತ್ರಜ್ಞಾನದ‌‌ ಮೂಲಕ ಓರಲ್ ಕ್ಯಾನ್ಸರ್ ಪತ್ತೆ ಮಾಡುವುದು ಚಿಕಿತ್ಸೆ ನೀಡುತ್ತಿದ್ದಾರೆ. ಸಾಕಷ್ಟು ಸಾಧನೆಯ ಮೂಲಕ ಹೆಸರು ಮಾಡಿರುವ ಡಾ.ಚಂದ್ರಶೇಖರ ಯಾವಗಲ್ ಅವರು, ದಂತ ಮತ್ತು ಓರಲ್ ಕ್ಯಾನ್ಸರ್ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ನೀಡುವ ಮೂಲಕ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಏಪ್ರಿಲ್ ನ್ನು ವರ್ಲ್ಡ್ ಓರಲ್ ಕ್ಯಾನ್ಸರ್ ತಿಂಗಳು ಎಂದು ಆಚರಿಸಲಾಗುತ್ತದೆ. ಈ ಬಗ್ಗೆ ವೈದ್ಯರು ಏನಂತಾರೇ ನೋಡಿ..

ಇನ್ನೂ ಪ್ರತಿ 90 ಸೆಕೆಂಡ್ ಗೆ ಒಬ್ಬ ಭಾರತೀಯ ಓರಲ್ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ.‌ ಇದನ್ನು ಜಾಗತಿಕವಾಗಿ ಲೆಕ್ಕ ಹಾಕುತ್ತ ಹೋದರೇ, ನಿಜಕ್ಕೂ ದೊಡ್ಡ ಸಂಖ್ಯೆಯೇ ಕಣ್ಣು ಮುಂದೆ ಬರುತ್ತದೆ. ಹಾಗಿದ್ದರೇ ಈ ರೋಗದ‌ ಪತ್ತೆ ಮಾಡುವುದು ಹೇಗೆ ಎಂದು ಕೊಂಡರೇ, ಅದಕ್ಕೆ ಪೂರಕವಾಗಿ ಡಾ.ಚಂದ್ರಶೇಖರ ಯಾವಗಲ್ ಅವರು, ವಿಶೇಷ ಅನ್ವೇಷಣೆ ಮೂಲಕ ಐಎ ತಂತ್ರಜ್ಞಾನ ಪರಿಚಯಿಸುತ್ತಿದ್ದು, ಎಐ ಆಧಾರಿತ ಯಂತ್ರದ‌ ಮುಂದೇ ನಿಂತುಕೊಂಡು ನಿಮ್ಮ ಬಾಯಿಯನ್ನು ತೆರೆದರೇ‌ ನಿಮ್ಮಲ್ಲಿರುವ ನ್ಯೂನತೆಗಳನ್ನು, ಕ್ಯಾನ್ಸರ್ ಕಾರಕ ಸೂಕ್ಷ್ಮಜೀವಿಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಲೇಸರ್ ಬಳಕೆಯಲ್ಲಿ ಕನಿಷ್ಠ 20 ವರ್ಷಗಳ ಅನುಭವ ಹೊಂದಿರುವ ಡಾ.ಚಂದ್ರಶೇಖರ ಯಾವಗಲ್ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು, ಏಪ್ರಿಲ್ ತಿಂಗಳಿನಲ್ಲಿ ಬಾಯಿ ಕ್ಯಾನ್ಸರ್ ಜಾಗೃತಿ ತಿಂಗಳ ಎಂದು ಜಾಗತಿಕವಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ಈಗ ರೋಗ ಪತ್ತೇ ಮಾಡುವ ಜೊತೆಗೆ ಚಿಕಿತ್ಸೆಗೆ ಹಲವಾರು ರೀತಿಯ ದಾರಿಯನ್ನು ಪತ್ತೇ ಮಾಡಿದ್ದಾರೆ.

ಇನ್ನೂ ಬಾಯಿ ಕ್ಯಾನ್ಸರ್ ನಿಜಕ್ಕೂ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಲ್ಲದೆ ಬಾಯಿಯಲ್ಲಿ ಹಾಗೂ ದಂತದಲ್ಲಿ ಏನಾದರೂ ಸಮಸ್ಯೆಗಳಿದ್ದರೂ, ಒಂದು ಸಾರಿ ಸ್ಕ್ರೀನಿಂಗ್ ಮಾಡಿಸುವುದು ನಿಜಕ್ಕೂ ರೋಗ ಬರುವ ಮುಂಚೆಯೇ ಜಾಗೃತಿ ವಹಿಸುವುದು ಸೂಕ್ತವಾಗಿದೆ.

ಒಟ್ಟಿನಲ್ಲಿ ಎಐ ತಂತ್ರಜ್ಞಾನದ ಮೂಲಕ ಓರಲ್ ಕ್ಯಾನ್ಸರ್ ಪತ್ತೆ ಮಾಡುವ ಹಾಗೂ ಚಿಕಿತ್ಸೆ ನೀಡುವ ಕಾರ್ಯವನ್ನು ಡಾ.ಚಂದ್ರಶೇಖರ ಯಾವಗಲ್ ಅವರು ಮಾಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಹಾಗಿದ್ದರೇ ನಿಮ್ಮ ಆರೋಗ್ಯದ ಕಾಳಜಿ ನಿಮ್ಮ ಕೈಯಲ್ಲಿದೆ. ಇಂದೇ ಭೇಟಿ ನೀಡಿ

LaserVEDA, 2nd cross, kalyan Nagar

Behind hotel Hans

Hubli-31, KA, India

For Appointments:

0804-7484-538

Only For Emergency:

0836-7963-589

For Online/Digital Consult:

www.laserveda.org

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/04/2026 05:03 pm

Cinque Terre

26.81 K

Cinque Terre

0

ಸಂಬಂಧಿತ ಸುದ್ದಿ