ಬೆಳಗಾವಿ: ಲೀಚಿ ಬ್ರಾಂಡ್... ಇದೊಂದು ಸಾಫ್ಟ್ ಡ್ರಿಂಕ್, ಚಿಪ್ಸ್, ಬಿಸ್ಕಿಟ್, ಚಾಕೋಲೆಟ್ ಹೊಂದಿರುವ ಕಂಪನಿ. ಆದರೆ, ಕಂಪನಿಯ ಬ್ಯೂರೋಜಿಸ್ ಸೇಲ್ಸ್ ಮ್ಯಾನೇಜರ್ ಧರ್ಮ ಹಾಗೂ ಪಕ್ಷ ನೋಡಿ ಏಜೆನ್ಸಿ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಹೌದು.. ಲೀಚಿ ಬ್ರಾಂಡ್ ಸೇಲ್ಸ್ ಮ್ಯಾನೇಜರ್ ಆಸೀರ್ ಅಹಮ್ಮದ್ SDPI ಫಾಲೋವರ್ ಎಂಬ ಮಾತುಗಳು ಕೇಳಿ ಬಂದಿದೆ. ನಿರ್ಮಲಾ ನಾಜರೆ ಅವರು ಕಳೆದ ಐದು ವರ್ಷದಿಂದ ಬೆಳಗಾವಿ ಜಿಲ್ಲೆಯ ಏಜೆನ್ಸಿ ಹೊಂದಿದ್ದರು. ಇವರು ಬಿಜೆಪಿ ನಾಯಕರಾದ ಸಂಸದ ಜಗದೀಶ್ ಶೆಟ್ಟರ್, ಶಾಸಕ ಅಭಯ ಪಾಟೀಲ್, ದಿ. ಸುರೇಶ್ ಅಂಗಡಿ ಅವರ ಅನುಯಾಯಿಗಳು. ಇದೇ ಕಾರಣಕ್ಕೆ ಹುಬ್ಬಳ್ಳಿ ಮಾದರಿಯಲ್ಲಿ ಬೆಳಗಾವಿಯಲ್ಲೂ ಏಜೆನ್ಸಿ ಬಂದ್ ಮಾಡಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಇದೇ ರೀತಿ ಈಗಾಗಲೇ ಹುಬ್ಬಳಿಯ ಏಜೆನ್ಸಿ ಹೊಂದಿದ ವ್ಯಕ್ತಿ ಮುಸ್ಲಿಂ ಆದರೂ ಪಕ್ಕಾ ಬಿಜೆಪಿ ಫಾಲೋವರ್. ಮುಸ್ಲಿಂ ಆಗಿ ಬಿಜೆಪಿಗೆ ಸಪೋರ್ಟ್ ಮಾಡ್ತೀಯಾ ಅಂತ ಅವರ ಲೀಚಿ ಏಜೆನ್ಸಿ ಬಂದ್ ಮಾಡಿದ್ದಾರೆ ಎಂಬ ಅರೋಪಿಸಲಾಗಿದೆ. ಅಂತಹದ್ದೇ ಆರೋಪ ಈಗ ಬೆಳಗಾವಿಯಲ್ಲೂ ಕೇಳಿ ಬಂದಿದೆ.
ನಿರ್ಮಲಾ ನಾಜರೆ ಅವರು ಲೀಚಿ ಫ್ರಾನ್ಸ್ ಬ್ಯೂರೋಜಿಸ್ ಇಂಡಿಯಾ Pvt Ltd ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದರು. ಆದರೆ, ಬಿಜೆಪಿ ಅನುಯಾಯಿಗಳು ಎಂಬ ಕಾರಣಕ್ಕೆ ಇದಕ್ಕೆ ಏಜೆನ್ಸಿ ಬಂದ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಬಿಜೆಪಿ ಮುಖಂಡರು ನಿಲುವು ತೆಗೆದುಕೊಂಡು ತಮ್ಮ ಕಾರ್ಯಕರ್ತನಿಗೆ ನ್ಯಾಯ ಒದಗಿಸಿಕೊಡಬೇಕಿದೆ.
PublicNext
04/04/2026 07:31 am
LOADING...