ಅಥಣಿ:ಇಲ್ಲಿ ಎಷ್ಟೇ ಬರವಿದ್ದರೂ ಆ ದಿನಗಳಲ್ಲಿ ಮಾತ್ರ ನೀರಿಗೆ ಬರವಿಲ್ಲ, ಉತ್ಸವ ಮುಗಿದ ಮಾರನೇ ದಿನ ಮಾತ್ರ, ಎಷ್ಟೇ ಪ್ರಯತ್ನ ಪಟ್ಟರೂ ನೀರು ಸಿಗುವುದಿಲ್ಲ, ಹೀಗೊಂದು ಅಚ್ಚರಿಯ ಘಟನೆ ನಡೆಯೋದು ಎಲ್ಲಿ ಅಂತೀರಾ ಹಾಗಿದ್ರೆ ಈ ಸ್ಟೋರಿನೊಮ್ಮೆ ಪೂರ್ತಿಯಾಗಿ ನೋಡಿ.
ಅದು ಶಿವಯೋಗಿಯ ನಾಡು, ಪವಾಡ ಘಟನೆಗಳಿಗೆ ಸಾಕ್ಷಿಯಾದ ನಾಡು ಕೆಲ ಪ್ರದೇಶ ಕೃಷ್ಣ ನದಿಯ ಪಕ್ಕದಲ್ಲಿ ಹಸಿರಿನಿಂದ ಕಂಗೊಳಿಸಿದರೆ, ಕೆಲ ಪ್ರದೇಶಗಳಿಗೆ ನೀರಿನ ಬವಣೆ ತಪ್ಪಿದಲ್ಲ. ಆದರೆ ವರ್ಷವಿಡೀ ಬಂದ್ ಆಗಿರೋ ಬೋರ್‌ವೆಲ್ ಉತ್ಸವದಲ್ಲಿ ಎಲ್ಲರ ನೀರಿನ ಬವಣೆ ನೀಗಿಸುತ್ತದೆ ಈ ಅಚ್ಚರಿ ಘಟನೆ ಸಾಕ್ಷಿಯಾಗಿರೋದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ.
ಹೀಗೆ ದೇವಸ್ಥಾನದ ಪಕ್ಕದಲ್ಲಿ ಸುಮಾರು ವರ್ಷಗಳ ಹಿಂದೆ ಕೊರೆಯಲಾದ ಬೋರ್‌ವೆಲ್ ವರ್ಷವಿಡೀ ಬತ್ತಿರುತ್ತದೆ. ಆದರೆ ಎಷ್ಟೇ ಬರವಿದ್ದರೂ ಬಿರು ಬೇಸಿಗೆಯಲ್ಲಿ ನಡೆಯುವ ಜಾತ್ರೆಯಲ್ಲಿ ಬರುವ ಲಕ್ಷಾಂತರ ಭಕ್ತರು ಹಾಗೂ ಜಾನುವಾರುಗಳಿಗೆ ನೀರು ಪೂರೈಸುತ್ತದೆ. ಜಾತ್ರೆ ಮುಗಿದ ನಂತರ ಇದರಿಂದ ನೀರು ಬರುವುದಿಲ್ಲ ಎಂಬ ಸ್ಥಳೀಯರ ಮಾತು ಅಚ್ಚರಿ ಮೂಡಿಸುತ್ತದೆ.
ಸ್ಥಳೀಯರ ಹೇಳಿಕೆಯ ಪ್ರಕಾರ ಇದು ಶ್ರೀ ಮುರುಘೆಂದ್ರ ಶಿವಯೋಗಿಗಳ ಪವಾಡ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಹಲವು ಬಾರಿ ಜಾತ್ರೆಯ ಮೊದಲು ಹಾಗೂ ನಂತರದಲ್ಲಿ ನೀರು ತೆಗೆಯಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಬತ್ತಿರುತ್ತದೆ. ಜಾತ್ರೆ ಹಾಗೂ ಉತ್ಸವಗಳು ಬಂದರೆ. ಯಾವತ್ತೂ ನೀರಿಗೆ ಬರ ಇಲ್ಲ ಅನ್ನೋದು ಸ್ಥಳೀಯ ನಂಬಿಕೆಗೆ ಜೀವಂತ ಸಾಕ್ಷಿಯಾಗಿದೆ.
ಲಕ್ಷ್ಮಣ ಕೋಳಿ ಪಬ್ಲಿಕ್ ನೆಕ್ಸ್ಟ್ ಅಥಣಿ
PublicNext
04/04/2026 08:49 am
LOADING...