ಬೆಳಗಾವಿ : ಜಿಲ್ಲೆ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನದ ಬಳಿಯ ನಿರ್ಮಾಣವಾಗುತ್ತಿರುವ ಬುದ್ಧ ವಿಹಾರ ಕಟ್ಟಡ ನಿರ್ಮಾಣ ಸ್ಥಳಕ್ಕೆ ಶ್ರೀಲಂಕಾದ ಜ್ಞಾನಜೋತಿ ಬಂತೇಜಿ ಅವರು ಔಪಚಾರಿಕವಾಗಿ ಭೇಟಿ ನೀಡಿದರು.
ಈ ವೇಳೆ ಬಂತೇಜಿ ಅವರು ನಿರ್ಮಾಣ ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು, ಸ್ಥಳದ ಪ್ರಗತಿಯನ್ನು ಪರಿಶೀಲಿಸಿದರು. ಅಲ್ಲದೆ ಗೌತಮ ಬುದ್ಧ ಅವರ ಆಚಾರ-ವಿಚಾರಗಳ ಮಹತ್ವವನ್ನು ವಿವರಿಸಿ, ಶಾಂತಿ ಮತ್ತು ಧ್ಯಾನ ಜೀವನದ ಅಗತ್ಯತೆ ಬಗ್ಗೆ ತಿಳಿಸಿದರು. ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ನಡೆ-ನುಡಿಗಳ ಬಗ್ಗೆ ಮಾತನಾಡಿ, ಸಮಾನತೆ ಮತ್ತು ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು.
ಇದೇ ಸಂದರ್ಭದಲ್ಲಿ, ನಿರ್ಮಾಣ ಸ್ಥಳದಲ್ಲಿ ಬುದ್ಧನ ಧ್ಯಾನ ಹಾಗೂ ಜ್ಞಾನ ಚಿಂತನೆಗಳನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಡೆಸುವಂತೆ ಸಲಹೆ ನೀಡಿದರು.
ಬಂತೇಜಿ ಅವರ ಭೇಟಿ ಅಂಗವಾಗಿ ಅವರನ್ನು ಗೌರವಪೂರ್ವಕವಾಗಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ರಾಮ ಕಾಂಬಳೆ, ಗ್ರಾಮದ ಹಿರಿಯರಾದ ಹನುಮಂತ ಕಾಂಬಳೆ ಮಹಾದೇವ ಕಾಂಬಳೆ, ಜಯಕುಮಾರ ಕಾಂಬಳೆ, ಮುತ್ತಪ್ಪ ಕಾಂಬಳೆ, ಶೇಖರ ಕಾಂಬಳೆ, ಸೇರಿದಂತೆ ಹಲವು ಗಣ್ಯರು , ಮಹಿಳೆಯರು ಭಾಗವಹಿಸಿದ್ದರು.
Kshetra Samachara
01/04/2026 08:44 am
LOADING...