ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ ಕೊಲೆ ಪ್ರಕರಣ : ಮಾರಕಾಸ್ತ್ರಗಳಿಂದ ಭೀಕರ ಹತ್ಯೆ, ಎಂಟು ಮಂದಿ ಅಂದರ್!

ಬೆಳಗಾವಿ: ಹಳೆಯ ವೈಷಮ್ಯಕ್ಕೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಮಾರ್ಚ್ 31 ರಂದು ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ಸಂಗನಗೌಡ ಬಸನಗೌಡ ಪಾಟೀಲ್ (50) ಎಂಬುವರ ಕೊಲೆ ಆಗಿತ್ತು.‌ ಕೊಲೆಯಾದ ವ್ಯಕ್ತಿ ಹಾಗೂ ಕೊಲೆ ಮಾಡಿದ ಆರೋಪಿಗಳ ನಡುವೆ ಕಳೆದ ಕೆಲ ವರ್ಷಗಳಿಂದ ಕಲಹ ನಡೆಯುತ್ತಿತ್ತು. ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಕೊಲೆಯಾದ ಸಂಗನಗೌಡ ಪಾಟೀಲ್ ಮದ್ಯಪಾನ ಮಾಡಿ ಡ್ಯಾನ್ಸ್ ಮಾಡುವ ವೇಳೆ ಭೀಕರವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.

ದೇಮಪ್ಪ @ ಮುದಕಪ್ಪ ಬಸಲಿಂಗಪ್ಪ ಬಳಗನ್ನವರ (49), ಮಂಜುನಾಥ ಮಾರುತಿ ಬಳಗನ್ನವರ (27), ರುದ್ರಪ್ಪ ಚೂನಪ್ಪ @ ಶಿವನಪ್ಪ ಬಳಗನ್ನವರ (36), ವಿಜಯ ಸುರೇಶ ಬಳಗನ್ನವರ (26), ಸೂರಪ್ಪ ಬಸಲಿಂಗಪ್ಪ ಬಳಗನ್ನವರ (56), ಸಿದ್ದಪ್ಪ ಬಸಪ್ಪ ಸಿಂಗಾಡಿ ವಯಸ್ಸು (21), ನಾಗರಾಜ ರಾಮಪ್ಪ ಬಳಗನ್ನವರ (26) ಹಾಗೂ ಬಸವಂತಪ್ಪ ಲಕ್ಷ್ಮಣ ಬಳಗನ್ನವರ (45) ಎಂಬ 8 ಜನ ಆರೋಪಿಗಳನ್ನು ನೇಸರಗಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Edited By : Manjunath H D
PublicNext

PublicNext

04/04/2026 10:05 pm

Cinque Terre

5.91 K

Cinque Terre

0

ಸಂಬಂಧಿತ ಸುದ್ದಿ