ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂಜಾಟದ ವಿರುದ್ಧ ನಗರ ಪೊಲೀಸರ ಕಾರ್ಯಾಚರಣೆ : ಮೂವರ ಬಂಧನ

ಬೆಳಗಾವಿ ನಗರದಲ್ಲಿ ಅಕ್ರಮ ಮಟಕಾ ಜೂಜಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ನಗರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾರುತಿ ನಗರದ ಮಂಜುನಾಥ ಯಲ್ಲಪ್ಪ ತಿಗಡಿ (40), ಮಣ್ಣೂರಿನ ನಿವಾಸಿಗಳಾದ ಭಜರಂಗ ಅಶೋಕ ಕದಮ್ (40) ಹಾಗೂ ಅಜಿತ ಮಾರುತಿ ದೋನಕರಿ ಬಂಧಿತರು.

ಏ.2ರಂದು ಮಾರ್ಕೆಟ್ ಠಾಣೆ ವ್ಯಾಪ್ತಿಯ ದೇಶಪಾಂಡೆ ಗಲ್ಲಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ವೇಳೆ ಮಂಜುನಾಥ ತಿಗಡಿಯನ್ನು ಬಂಧಿಸಲಾಗಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ, ಮಣ್ಣೂರಿನ ಡಯಟ್ ಕಾಲೇಜು ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ಭಜರಂಗ ಕದಮ್ ಮತ್ತು ಅಜಿತ ದೋನಕರಿಯನ್ನು ಬಂಧಿಸಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

04/04/2026 09:42 am

Cinque Terre

3.04 K

Cinque Terre

0

ಸಂಬಂಧಿತ ಸುದ್ದಿ