ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಲಿಂಡರ್ ಅಭಾವದ ನಡುವೆ ಕಟ್ಟಿಗೆ ಬೆಲೆ ಏರಿಕೆ ಬಿಸಿ - ಒಂದರ ಹಿಂದೆಯೇ ಮತ್ತೊಂದು ಸಂಕಷ್ಟ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಈಗ ಸಿಲಿಂಡರ್ ಅಭಾವದ ಜೊತೆ ಕಟ್ಟಿಗೆ ಬೆಲೆ ಏರಿಕೆ ಸಂಕಷ್ಟ ಎದುರಾಗಿದೆ. ಹುಬ್ಬಳ್ಳಿಯ ಹೋಟೆಲ್‌ ಮಾಲೀಕರಿಗೆ ಕಟ್ಟಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ಸೌದೆ ಕಟ್ಟಿಗೆಗೆ ಹೆಚ್ಚಾದ ಡಿಮ್ಯಾಂಡ್. ಹೀಗಾಗಿ ಕಟ್ಟಿಗೆ ಬೆಲೆ‌ ಹೆಚ್ಚಳ. ಹೌದು.. ಮೊದಲು ಪ್ರತಿ ಕ್ವಿಂಟಲ್‌ ಕಟ್ಟಿಗೆ 600-700 ರೂಪಾಯಿ ಇತ್ತು. ಇದೀಗ 1200 ರೂಪಾಯಿ ಹೆಚ್ಚಳವಾಗಿದೆ. ವಾಹನ ಬಾಡಿಗೆ ಸೇರಿ ಹೋಟೆಲ್‌ ಗೆ ಬರಲು 1500 ರೂಪಾಯಿ ಖರ್ಚು ಆಗುತ್ತದೆ. ಪ್ರತಿ ಕ್ವಿಂಟಲ್ ಕಟ್ಟಿಗೆಗೆ 1500 ರೂಪಾಯಿ ಖರ್ಚು ಮಾಡಬೇಕಾದ ಸ್ಥಿತಿ ಎದುರಾಗಿದೆ.

ಇನ್ನೊಂದೆಡೆ 21 ದಿನಕ್ಕೆ ಎರಡು ಕಮರ್ಷಿಯಲ್ ಸಿಲಿಂಡರ್ ನೀಡ್ತಿರೋ ಏಜನ್ಸಿ ಗಳು. ಆದ್ರೆ ತಮಗೆ ದಿನಕ್ಕೆ ಎರಡು ಸಿಲಿಂಡರ್ ಬೇಕು. ಕಟ್ಟಿಗೆ ಬಳಸೋಣಾ ಅಂದ್ರೆ ಅದರ ಬೆಲೆ ಕೂಡಾ ಹೆಚ್ಚಳವಾಗ್ತಿದೆ. ಹೀಗಾದ್ರೆ ಹೋಟೆಲ್‌ ನಡೆಸೋದು ಕಷ್ಟ ಅಂತಿದ್ದಾರೆ ಹೋಟೆಲ್ ಮಾಲೀಕರು.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/04/2026 06:01 pm

Cinque Terre

35.58 K

Cinque Terre

2

ಸಂಬಂಧಿತ ಸುದ್ದಿ