ಧಾರವಾಡ: ಮೊನ್ನೆಯಷ್ಟೇ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಮನೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೇ ಕಿಮ್ಸ್‌ನಲ್ಲಿ ಅಸುನೀಗಿದ್ದಾಳೆ.
ತಡಕೋಡ ಗ್ರಾಮದ ಪೂರ್ಣಿಮಾ ಹಾದಿಮನಿ (37) ಎಂಬುವವರೇ ಸಾವನ್ನಪ್ಪಿದವರು.
ಪೆಟ್ರೋಲ್ ಅಭಾವ ಇದೆ ಎಂಬ ವದಂತಿ ಹಿನ್ನೆಲೆ ಪೂರ್ಣಿಮಾ ಅವರ ಮನೆಯಲ್ಲಿ ಪೆಟ್ರೋಲ್ ಸಂಗ್ರಹ ಮಾಡಿ ಇಡಲಾಗಿತ್ತು. ಪ್ರಿಡ್ಜ್ ಪಕ್ಕವೇ ಪೆಟ್ರೋಲ್ ಕ್ಯಾನ್ ಇಟ್ಟಿದ್ದರಿಂದ ಆಕಸ್ಮಿಕವಾಗಿ ಪೆಟ್ರೋಲ್ ಕ್ಯಾನ್‌ಗೆ ಬೆಂಕಿ ತಗುಲಿ ಇಡೀ ಬೆಂಕಿ ಮನೆಗೆ ಆವರಿಸಿತ್ತು.
ಇದರಿಂದ ಮನೆಯಲ್ಲಿದ್ದ ಪೂರ್ಣಿಮಾ ಬೆಂಕಿಯಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಕಿಮ್ಸ್‌ಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನ್ನಪ್ಪಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/04/2026 04:12 pm
LOADING...