ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹನುಮಜಯಂತಿ - ಧಾರವಾಡದಲ್ಲಿ ಪೊಲೀಸರಿಂದ ರೂಟ್ ಮಾರ್ಚ್

ಧಾರವಾಡ: ಹನುಮಜಯಂತಿ ಅಂಗವಾಗಿ ಧಾರವಾಡದಲ್ಲಿ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು.

ಗುರುವಾರ ನಾಡಿನಾದ್ಯಂತ ಹನುಮಜಯಂತಿ ಆಚರಣೆ ಮಾಡಲಾಗುತ್ತಿದೆ. ಧಾರವಾಡದಲ್ಲೂ ಸಂಭ್ರಮದಿಂದ ಹನುಮಜಯಂತಿ ಆಚರಣೆ ಮಾಡಲಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ನೇತೃತ್ವದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.

ಧಾರವಾಡದ ಶಹರ ಠಾಣೆ ವತಿಯಿಂದ ಆರಂಭವಾದ ಪೊಲೀಸರ ರೂಟ್ ಮಾರ್ಚ್ ಧಾರವಾಡದ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಂಚರಿಸಿತು. ಡಿಸಿಪಿಗಳಾದ ರವೀಶ್, ಶ್ರುತಿ ಅವರೂ ಈ ರೂಟ್ ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದರು.

ಹನುಮಜಯಂತಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸುವ ದೃಷ್ಟಿಯಿಂದ ಪೊಲೀಸರು ಈ ರೂಟ್ ಮಾರ್ಚ್ ನಡೆಸಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/04/2026 04:49 pm

Cinque Terre

14.27 K

Cinque Terre

0

ಸಂಬಂಧಿತ ಸುದ್ದಿ