ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 'ಯುದ್ಧ ನಿಲ್ಲಲಿ... ಶಾಂತಿ ನೆಲೆಸಲಿ' - ಜಾತ್ರೆಯಲ್ಲಿ ದೇವರಿಗೆ ಮೊರೆ ಇಟ್ಟ ಯುವಕ

ಧಾರವಾಡ: ಮಧ್ಯಪ್ರಾಚ್ಯ ಯುದ್ಧ ಸಂಘರ್ಷದಿಂದ ಜಗತ್ತಿನ ಬಹುತೇಕ ದೇಶಗಳು ನಲುಗಿ ಹೋಗಿವೆ. ಯುದ್ಧದ ವ್ಯತಿರಿಕ್ತ ಪರಿಣಾಮ ಎಲ್ಲ ದೇಶಗಳ ಮೇಲೂ ಆಗುತ್ತಿದೆ. ಹೀಗಾಗಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಅನೇಕ ಸಹೃದಯಿ ಜನತೆ ದೇವರ ಮೊರೆ ಹೋಗುತ್ತಿದ್ದಾರೆ.

ಅದರಂತೆ ನಿನ್ನೆ ಗುರುವಾರ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದ ಮಹಾಂತ ಶಿವಯೋಗಿಗಳ ಜಾತ್ರೆಯಲ್ಲಿ ಯುವಕನೊಬ್ಬ ದೇವರಿಗೆ ವಿಶಿಷ್ಟ ಮೊರೆ ಇಟ್ಟಿದ್ದಾನೆ. 'ಯುದ್ಧ ನಿಲ್ಲಲಿ... ಶಾಂತಿ ನೆಲೆಸಲಿ' ಎಂದು ಬಾಳೆಹಣ್ಣಿನ ಮೇಲೆ ಬರೆದು ಅದನ್ನು ತೇರಿಗೆ ಎಸೆದಿದ್ದಾನೆ.

ಈ ಮೂಲಕ ಯುದ್ಧ ಶಾಶ್ವತವಾಗಿ ನಿಂತು ಜಗತ್ತಿನ ಎಲ್ಲ ದೇಶಗಳ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ತಮ್ಮ ಊರಿನ ದೇವರಿಗೆ ಬೇಡಿಕೊಂಡಿದ್ದಾನೆ. ಆತ ಈ ರೀತಿ ದೇವರಿಗೆ ಬೇಡಿಕೆ ಇಟ್ಟಿರುವ ಫೋಟೋ ಈಗ ವೈರಲ್ ಆಗುತ್ತಿದೆ.

Edited By :
Kshetra Samachara

Kshetra Samachara

03/04/2026 06:45 pm

Cinque Terre

6.1 K

Cinque Terre

2

ಸಂಬಂಧಿತ ಸುದ್ದಿ