ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದೂ ಹುಡುಗಿ ಸಮೀರ್ ಎಂಬಾತ ನನ್ನ ತಮ್ಮ ಇವರಿಬ್ಬರೂ ಮೂರು ವರ್ಷದಿಂದ ರಿಲೇಶನ್‌ಶೀಪ್‌ನಲ್ಲಿದ್ದಾರೆ. ಎಸ್.ಎಸ್.ಕೆ ಸಮಾಜದವರು ನಮ್ಮ ಮನೆಗೆ ಬಂದು ನನ್ನ ತಮ್ಮನನ್ನು ಕಿಡ್ನ್ಯಾಪ್ ಮಾಡಿದ್ದಾರೆಂದು ಸಮೀರ್ ಸಹೋದರಿ ಸಮೀರ್ ಸಹೋದರಿ ತೈಸಿಮ್ ಮುಲ್ಲಾ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಅನ್ಯೋನ್ಯವಾಗಿದ್ದರು, ನಾವೆಲ್ಲ ಸೇರಿಯೇ ಪ್ರವಾಸಕ್ಕೆ, ಶಾಪಿಂಗ್‌ಗೆ ಹೋಗ್ತಿದ್ವಿ 23 ವರ್ಷದ ನನ್ನ ತಮ್ಮನನ್ನು ಬೆಳಗ್ಗೆ 7 ಗಂಟೆಗೆ ಕಿಡ್ನಾಪ್ ಮಾಡಿದ್ದಾರೆ. ನನ್ನ ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅವನಿಗಾಗಿ ಎಲ್ಲಾ ಕಡೆಗಳಲ್ಲೂ ಹುಡುಕಿದ್ದೇವೆ ದನದ ಶೆಡ್‌ಗೆ ಕರೆದು ನೂರು ಜನರಿಂದ ಹಲ್ಲೆ ಮಾಡಲಾಗಿದೆ. ಅನಂತರ ನಾವು ಹುಡುಗಿಯ ಮನೆಗೆ ಸಹ ಹೋಗಿದ್ವಿ ಯುವತಿಯ ಮನೆ ಬಳಿ ಗಲಾಟೆ ಆಗಿದೆ. ಯುವತಿಯ ಮನೆಯವರು ಮೊದಲೆಲ್ಲ ನಮ್ಮ ಮನೆಗೆ ಬಂದು ಹೋಗಿದ್ದಾರೆ. ನಮ್ಮ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಘಟನೆ ಹಿನ್ನೆಲೆ ಎಲ್ಲರೂ ಆತಂಕದಲ್ಲಿದ್ದಾರೆ. ಹೀಗಾಗಿ ನಾವು ಯುವತಿಯ ಮನೆಗೂ ಕೂಡ ಹೋಗಿದ್ವಿ, ಎಸ್ ಎಸ್ ಕೆ ಸಮಾಜದವರಿಗೆ ನಮ್ಮ ಅನ್ಯೋನ್ಯತೆ ಬಗ್ಗೆ ಏನು ಗೊತ್ತಿಲ್ಲ, ನಮ್ಮ ತಮ್ಮನನ್ನು ಅಪಹರಿಸಿದ ಹಿನ್ನೆಲೆ ನಾವು ಈಗಾಗಲೇ ದೂರು ದಾಖಲಿಸಿದ್ದೇವೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/04/2026 02:07 pm
LOADING...