ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌: ಖುಷಿ ತುಂಬಾ ಒಳ್ಳೆಯವಳು, ಅವರ ತಂದೆ-ತಾಯಿ, ಸಮಾಜ ಸುಳ್ಳು ಹೇಳ್ತಿದೆ - ಆರೋಪಿ ಸ್ಪೋಟಕ ಹೇಳಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 'ಲವ್ ಜಿಹಾದ್' ಪ್ರೇರಣೆ ಆರೋಪ ಎದುರಿಸುತ್ತಿರುವ ಸಮೀರ್ ಮುಲ್ಲಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ. "ಖುಷಿ ತುಂಬ ಒಳ್ಳೆಯವಳು, ಅವಳ ತಂದೆ-ತಾಯಿ ಮತ್ತು ಸಮಾಜದವರು ಸುಳ್ಳು ಹೇಳಿಸುತ್ತಿದ್ದಾರೆ" ಎಂದು ಆರೋಪಿ ಸಮೀರ್ ಮುಲ್ಲಾ ಪ್ರತಿ ಆರೋಪ ಮಾಡಿದ್ದಾನೆ.

ಆರೋಪಿ ಸಮೀರ್ ಮುಲ್ಲಾ ಸಮರ್ಥನೆ

"ನಾನು ಇದುವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ, ಈಗ ಖುಷಿ ಕಲಬುರಗಿ ಅವರ ಎಲ್ಲಾ ಹೇಳಿಕೆಗಳನ್ನು ನೋಡಿದ್ದೇನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಯಾರು ವಿಡಿಯೋ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಖುಷಿ ಕಲಬುರಗಿಯೇ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾಳೆ. ನನ್ನ ಮೊಬೈಲ್ ಎಸ್‌ಎಸ್‌ಕೆ ಸಮಾಜದವರ ಬಳಿ ಇದೆ. ಖುಷಿಯ ಮೊಬೈಲ್ ಪರಿಶೀಲಿಸಬೇಕು," ಎಂದು ಸಮೀರ್ ಮುಲ್ಲಾ ಆಗ್ರಹಿಸಿದ್ದಾನೆ.

"ಖುಷಿ ಕಲಬುರಗಿ ಒಳ್ಳೆಯವಳು, ಆದರೆ ಅವಳ ತಂದೆ-ತಾಯಿ ಹಾಗೂ ಸಮಾಜದವರು ಸುಳ್ಳು ಹೇಳಿಸುತ್ತಿದ್ದಾರೆ" ಎಂದು ಆತ ಪುನರುಚ್ಚರಿಸಿದ್ದಾನೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/04/2026 07:32 pm

Cinque Terre

29.47 K

Cinque Terre

10

ಸಂಬಂಧಿತ ಸುದ್ದಿ