ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎಲ್‌ಪಿಜಿಗಾಗಿ ಬೆಳಿಗ್ಗೆಯಿಂದಲೂ ಕ್ಯೂ ನಿಂತ ಆಟೋಗಳು

ಧಾರವಾಡ: ಗ್ಯಾಸ್ ಸಿಲಿಂಡರ್ ಅಭಾವ ಒಂದೆಡೆಯಾದರೆ ಧಾರವಾಡದಲ್ಲಿ ಆಟೊ ಗ್ಯಾಸ್‌ಗೂ ಬರ ಎದುರಾಗಿದೆ. ಧಾರವಾಡದಲ್ಲಿರುವ ಎಲ್ಲ ಆಟೋ ಗ್ಯಾಸ್ ಬಂಕ್‌ಗಳು ಬಂದ್ ಆಗಿವೆ. ಇದರ ಮಧ್ಯೆ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಆಟೊ ಎಲ್‌ಪಿಜಿ ಸಿಗುತ್ತಿದ್ದು, ಇದಕ್ಕಾಗಿ ಆಟೋ ಚಾಲಕರು ಬೆಳಿಗ್ಗೆಯಿಂದಲೇ ಕ್ಯೂ ನಿಂತಿದ್ದಾರೆ.

ಹೌದು! ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ಆಟೋ ಎಲ್‌ಪಿಜಿ ಸಿಗುತ್ತಿದ್ದು, ಇದಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ಆಟೊಗಳು ಕ್ಯೂ ನಿಂತಿವೆ. ಇಲ್ಲಿ 94 ರೂಪಾಯಿಗೆ ಒಂದು ಕೆಜಿ ಎಲ್‌ಪಿಜಿ ಗ್ಯಾಸ್ ಸಿಗುತ್ತಿದ್ದು, ಇದು ಆಟೊ ಚಾಲಕರಿಗೆ ಹೊರೆಯಾಗಿದೆ.

ಈ ಬಂಕ್‌ನಲ್ಲೂ ಗ್ಯಾಸ್ ಖಾಲಿಯಾಗುತ್ತ ಬಂದಿದ್ದು, ಕೇವಲ 40 ಆಟೊಗಳಿಗೆ ಆಗುವಷ್ಟೇ ಗ್ಯಾಸ್ ಇದೆ. ಹೀಗಾಗಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದು, ಸರ್ಕಾರ ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಆಟೊ ಚಾಲಕರು ಆಗ್ರಹಿಸುತ್ತಿದ್ದಾರೆ.

ಆಟೋ ಮೇಲೆಯೇ ತಮ್ಮ ಜೀವನ ನಡೆಸುತ್ತಿರುವ ನೂರಾರು ಆಟೋ ಚಾಲಕರು ಇದೀಗ ಎಲ್‌ಪಿಜಿ ಅಭಾವದಿಂದ ತೀವ್ರ ತೊಂದರೆಗೀಡಾಗಿದ್ದಾರೆ. ಧಾರವಾಡದಲ್ಲಿರುವ ಎಲ್ಲ ಎಲ್‌ಪಿಜಿ ಬಂಕ್‌ಗಳಿಗೆ ಬೀಗ ಹಾಕಲಾಗಿದ್ದು, ರಾಯಾಪುರದಲ್ಲಿರುವ ಬಂಕ್‌ನಲ್ಲೂ ಇದೀಗ ಎಲ್‌ಪಿಜಿ ಖಾಲಿಯಾಗುವ ಹಂತ ತಲುಪಿದೆ.

ಆಟೋ ನಂಬಿ ಜೀವ ನಡೆಸುತ್ತಿರುವ ಚಾಲಕರು ನಿಜಕ್ಕೂ ಪರದಾಡುವಂತಾಗಿದ್ದು, ತಮಗೆ ಸರ್ಕಾರವೇ ಪರಿಹಾರ ಸೂಚಿಸಬೇಕು ಎಂದು ಚಾಲಕರು ಆಗ್ರಹಿಸುತ್ತಿದ್ದಾರೆ.

ಒಟ್ಟಾರೆ ಯುದ್ಧದಿಂದಾಗಿ ಒಂದೆಡೆ ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗಿದ್ದರೆ ಮತ್ತೊಂದೆಡೆ ಆಟೋಗಳನ್ನೇ ನಂಬಿ ಜೀವನ ನಡೆಸುತ್ತಿರುವ ಚಾಲಕರಿಗೆ ಎಲ್‌ಪಿಜಿ ಗ್ಯಾಸ್ ಸಿಗದೇ ಪರದಾಡುವಂತಾಗಿದೆ. ಅದ್ಯಾವಾಗ ಈ ಎಲ್ಲ ಸಮಸ್ಯೆಗೆ ಮುಕ್ತಿ ದೊರಕಿ ವ್ಯವಸ್ಥೆ ಮೊದಲಿನಂತಾಗುತ್ತದೆಯೋ ದೇವರೇ ಬಲ್ಲ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/04/2026 05:10 pm

Cinque Terre

39.79 K

Cinque Terre

0

ಸಂಬಂಧಿತ ಸುದ್ದಿ