ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏಕತಾ ಕಾಲೋನಿ ಫಸ್ಟ್ ಕ್ರಾಸ್ ನಲ್ಲಿದೆ ಜನರಿಗೆ ಬಹಳ ತ್ರಾಸ್ - ಚರಂಡಿ ನೀರಿನ ಸಮಸ್ಯೆಯಿಂದ ಜನ ಹೈರಾಣು

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿರುವ ಗಾಂಧಿ ಏಕತಾ ಕಾಲೋನಿಯ ಸಮಸ್ಯೆ ನೋಡಿದರೇ ನಿಜಕ್ಕೂ ಎಂತವರಿಗೂ ಮರುಕ ಹುಟ್ಟುವುದು ಖಂಡಿತ. ಫಸ್ಟ್ ಕ್ರಾಸ್‌ನಲ್ಲಿ ಸಮಸ್ಯೆ ನೋಡಿದರೇ ಜನರು ಎಷ್ಟು ತ್ರಾಸ ತೆಗೆದುಕೊಂಡು ಜೀವನ ನಡೆಸುತ್ತಾರೆ ಎಂಬುದು ಅರ್ಥವಾಗುತ್ತದೆ.

ಹೌದು.. ಡ್ರೈನೇಜ್ ನೀರು ಸಂಪೂರ್ಣ ಕಾಲೋನಿಯಲ್ಲಿ ಜಲಾವೃತಗೊಂಡಿದ್ದು, ಹರಿದು ಹೋಗಲು ಸಹ ಚರಂಡಿ ವ್ಯವಸ್ಥೆ ಇಲ್ಲದೆಯೇ ರಸ್ತೆಯಲ್ಲಿಯೇ ನಿಂತು ಕೊಳೆಯುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿಯಿಂದ ಜನರು ಪಾಲಿಕೆ ಸಿಬ್ಬಂದಿ ಹಾಗೂ ಕಾರ್ಪೊರೇಟರ್ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿಗಳಿಗೆ ಹಾಗೂ ಚುನಾಯಿತ ಪಾಲಿಕೆ ಸದಸ್ಯರಿಗೆ ಸಾರ್ವಜನಿಕರ ಸಮಸ್ಯೆ ಅಂದರೇ ಸಾಕಷ್ಟು ನಿರ್ಲಕ್ಷ್ಯ ಎಂಬಂತಾಗಿದೆ. ಅದೆಷ್ಟೋ ವರ್ಷಗಳಿಂದ ಸಮಸ್ಯೆ ತಲೆದೋರಿದ್ದರೂ, ಯಾರೊಬ್ಬರೂ ಕೂಡ ಕಾಳಜಿ ವಹಿಸುತ್ತಿಲ್ಲ.ಇನ್ನು ಇಲ್ಲಿನ ಜನರು, ಅದೆಷ್ಟೋ ಬಾರಿಗೆ ಫೋಟೋ ವಿಡಿಯೋ ಹಾಕಿ ಸಮಸ್ಯೆ ಹೇಳಿಕೊಂಡರೂ ಕೂಡ ಯಾರೊಬ್ಬರೂ ಇದುವರೆಗೂ ಪರಿಹಾರ ಕಲ್ಪಿಸದೇ ಇರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/04/2026 03:54 pm

Cinque Terre

46.72 K

Cinque Terre

0

ಸಂಬಂಧಿತ ಸುದ್ದಿ