ಧಾರವಾಡ: ಆರ್‌ಸಿಬಿಗಾಗಿ ಆಡುತ್ತಿರುವ ವಿರಾಟ್ ಕೊಹ್ಲಿ ಅವರ ಬೃಹತ್ ಭಾವಚಿತ್ರ ಕ್ಯಾನ್‌ವಾಸ್ ಮೇಲೆ ಮೂಡಿ ಬಂದಿದ್ದು, ಇದು ನೋಡುಗರ ಗಮನಸೆಳೆದಿದೆ.
ಹೌದು! 28 ಸ್ಕ್ವೇರ್ ಫೀಟ್ ಅಳತೆಯಲ್ಲಿ ವಿರಾಟ್ ಕೊಹ್ಲಿಯ ಭಾವಚಿತ್ರ ಮೂಡಿ ಬಂದಿದೆ. ಇದನ್ನು ಬಿಡಿಸಿದ್ದು, ಯಾವುದೇ ಚಿತ್ರಕಲೆ ಕುರಿತು ತರಬೇತಿ ಪಡೆಯದೇ ಇರುವ ವ್ಯಕ್ತಿ ಎಂದರೆ ನೀವು ನಂಬಲೇಬೇಕು.
ಮೂಲತಃ ಬ್ಯಾಹಟ್ಟಿ ತಾಲೂಕಿನ ಸಚಿನ್ ಸಿಂಗಮ್ಮನವರ ಎಂಬುವವರು ಈ ವಿರಾಟ್ ಕೊಹ್ಲಿ ಅವರ ಭಾವಚಿತ್ರವನ್ನು ಕ್ಯಾನ್‌ವಾಸ್ ಮೇಲೆ ಬಿಡಿಸಿದ್ದಾರೆ. ಎಂಎಸ್ಸಿ ಫೋರೆನ್ಸಿಕ್ ಮಾಡಿರುವ ಸಚಿನ್ ಚಿತ್ರಕಲೆ ಕುರಿತು ಯಾವುದೇ ತರಬೇತಿ ಪಡೆದಿಲ್ಲ. ಕೆಸಿಡಿ ಕಾಲೇಜಿನಲ್ಲೇ ಕಲಿತಿರುವ ಸಚಿನ್, ಇದೇ ಕಾಲೇಜು ಮುಂಭಾಗವೇ ವಿರಾಟ್ ಕೊಹ್ಲಿ ಅವರ ಚಿತ್ರ ಬಿಡಿಸುವ ಉದ್ದೇಶ ಹೊಂದಿದ್ದರು. ಆ ಪ್ರಕಾರ ಬೆಳಿಗ್ಗೆ ಕಾಲೇಜು ಮುಂಭಾಗದಲ್ಲಿ ಚಿತ್ರ ಬಿಡಿಸಲು ಪ್ರಾರಂಭಿಸಿದ ಸಚಿನ್, ಅದನ್ನು ಸಂಜೆ ಹೊತ್ತಿಗೆ ಪೂರ್ಣಗೊಳಿಸಿದ್ದಾರೆ.
28 ಸ್ಕ್ವೇರ್ ಫೀಟ್ ಅಳತೆಯಲ್ಲಿ ಇದುವರೆಗೂ ಯಾರೂ ವಿರಾಟ್ ಕೊಹ್ಲಿ ಅವರ ಭಾವಚಿತ್ರ ಬಿಡಿಸಿಲ್ಲ. ಇದೇ ಮೊದಲು ಎನ್ನುವ ಸಚಿನ್, ಈ ಚಿತ್ರವನ್ನು ಆರ್‌ಸಿಬಿ ಪೇಜ್‌ನಲ್ಲಿ ಪೋಸ್ಟ್ ಮಾಡುವ ಉದ್ದೇಶ ಹೊಂದಿದ್ದಾರೆ. ಆರ್‌ಸಿಬಿ ಪರ ಆಡಿ ಕಳೆದ ವರ್ಷ ಕಪ್ ಗೆದ್ದಿರುವ ವಿರಾಟ್ ಕೊಹ್ಲಿ ಅವರಿಗೆ ಮತ್ತಷ್ಟು ಹುರುಪು ತುಂಬುವ ಉದ್ದೇಶದಿಂದ ಈ ಚಿತ್ರ ಬಿಡಿಸಲಾಗಿದೆ ಎನ್ನುತ್ತಾರೆ ಸಚಿನ್.
ಸಚಿನ್ ಅವರು ಬಿಡಿಸಿದ ಈ ಚಿತ್ರ ಎಲ್ಲರ ಗಮನಸೆಳೆಯಿತು. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಆ ಚಿತ್ರವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡು ಸಚಿನ್ ಅವರು ಬಿಡಿಸಿದ ಚಿತ್ರವನ್ನು ನೋಡಿ ಲೈಕ್ ಕೂಡ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/04/2026 08:13 pm
LOADING...