ಹುಬ್ಬಳ್ಳಿ: ಕರಾಟೆಯಲ್ಲಿ ಏನಾದ್ರೂ ಒಂದು ಸಾಧನೆ ಮಾಡಬೇಕೆಂದು ಹೆಜ್ಜೆ ಇಟ್ಟಿದ್ದ, ಹುಬ್ಬಳ್ಳಿಯ ಯುವಕ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾನೆ.
ಹೌದು,,, ಕಲ್ಯಾಣಕುಮಾರ ಬಂಡಿ ಎಂಬ ಈ ಯುವಕ ಮಧ್ಯಪ್ರದೇಶ ಭೂಪಾಲ್‌ನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಹುಬ್ಬಳ್ಳಿಯನ್ನು ಪ್ರತಿನಿಧಿಸಿ ಕಿಕ್ ಬಾಕ್ಸ್ ಮಾಡುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ಹುಬ್ಬಳ್ಳಿಯ ಗದಗ ರೋಡ್ ಜನತಾ ಕಾಲೋನಿಯ ನಿವಾಸಿಯಾದ ಲಕ್ಷ್ಮಣ ಮತ್ತು ಶಾಂತಿ ಅವರ ಸುಪುತ್ರ, ಗಣೇಶ್ ಉಬಳೆ ಅವರ ಮಾರ್ಗದರ್ಶನದಲ್ಲಿ ಯೂತ್ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಕೇರಳ ಸಮಾಜ ಹುಬ್ಬಳ್ಳಿಯಲ್ಲಿ ಕಲ್ಯಾಣಕುಮಾರ ಅಭ್ಯಾಸ ಮಾಡುತ್ತಿದ್ದಾರೆ. ಇನ್ನು KIO ನ್ಯಾಷನಲ್ಸ್‌ನಲ್ಲಿ 2026 ರಲ್ಲಿ ಚಿನ್ನದ ಪದಕ, 2024 ರಲ್ಲಿ ಚಿನ್ನದ ಪದಕ, 2025 ರಲ್ಲಿ ಕಂಚಿನ ಪದಕ, ದಕ್ಷಿಣ ಭಾರತೀಯ ಕರಾಟೆ ಚಾಂಪಿಯನ್‌ಶಿಪ್ ಆಗಿ ಈಗ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಹೆಸರನ್ನು ಅಚ್ಚಳಿ ಮೂಡಿಸುತ್ತಿದ್ದಾರೆ. ಕಲ್ಯಾಣಕುಮಾರ ಅವರ ಸಾಧನೆ ಇನ್ನಷ್ಟು ಹೆಚ್ಚು ಶಿಖರದಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಓದುಗರ ಆಶಯ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/04/2026 08:40 am
LOADING...