ಧಾರವಾಡ: ಧಾರವಾಡದ ಪತ್ರೇಶ್ವರ ದೇವಸ್ಥಾನದ ದಾಟಿ ಮುಂದೆ ಹೋಗುತ್ತಿದ್ದಂತೆ ರಸ್ತೆಯಲ್ಲಿ ಸಾವಿಗೀಡಾಗಿ ಬಿದ್ದಿದ್ದ ನಾಲ್ಕು ರಾಸುಗಳಿಗೆ ಜುಬೇರ್ ಹಾಗೂ ಅವರ ಗೆಳೆಯರು ಮುಕ್ತಿ ನೀಡಿದ್ದಾರೆ.
ಹೌದು! ಈ ರಸ್ತೆಯಲ್ಲಿ ಕಸ ಚೆಲ್ಲುವುದರೊಂದಿಗೆ ಸಾವಿಗೀಡಾದ ಜಾನುವಾರುಗಳನ್ನೂ ಹಾಗೇ ತಂದು ಎಸೆದು ಹೋಗುತ್ತಾರೆ. ಗುರುವಾರ ಸಹ ಸಾವಿಗೀಡಾದ ನಾಲ್ಕು ರಾಸುಗಳನ್ನು ಯಾರೋ ತಂದು ರಸ್ತೆಯ ಪಕ್ಕವೇ ಹಾಗೇ ಎಸೆದು ಹೋಗಿದ್ದರು.
ಈ ವಿಷಯ ಅರಿತ ಜುಬೇರ್ ಎಂಬುವವರು ತಮ್ಮ ಸ್ನೇಹಿತರೊಡಗೂಡಿ ಜೆಸಿಬಿ ಸಹಾಯದಿಂದ ಗುಂಡಿ ತೋಡಿ ಆ ರಾಸುಗಳನ್ನು ಮಣ್ಣು ಮಾಡುವ ಮೂಲಕ ಆ ರಾಸುಗಳಿಗೆ ಮುಕ್ತಿ ನೀಡಿದ್ದಾರೆ.
Kshetra Samachara
26/03/2026 09:21 pm
LOADING...