ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾವೀರ ಜಯಂತಿಯಲ್ಲಿ ಗಮನ ಸೆಳೆದ ಧರ್ಮಸ್ಥಳ ಬುರುಡೆ ಗ್ಯಾಂಗ್ ಟ್ಯಾಬ್ಲೊ

ಬೆಳಗಾವಿ: ಮಹಾವೀರ ಜಯಂತಿ ಮೆರವಣಿಗೆ ವೇಳೆ ಧರ್ಮಸ್ಥಳ ಬುರುಡೆ ಪ್ರಕರಣ ಗಮನ ಸೆಳೆದಿದೆ. ಮಹಾವೀರ ಜಯಂತಿ ಪ್ರಯುಕ್ತ ಧರ್ಮಸ್ಥಳ ಬುರುಡೆ ಪ್ರಕರಣ ವಿಶೇಷ ಟ್ಯಾಬ್ಲೊ ವನ್ನು ಸಿದ್ಧಪಡಿಸಲಾಗಿತ್ತು.

ಕುಂದಾನಗರಿ ಬೆಳಗಾವಿಯಲ್ಲಿ ಮಹಾವೀರ ಜಯಂತಿ ಮೆರವಣಿಗೆಯಲ್ಲಿ ಸತ್ಯಕ್ಕೆ ಜಯ ಸುಳ್ಳಿಗೆ ಸೋಲು ಎನ್ನುವ ನ್ಯಾಯ ತಕ್ಕಡಿಯನ್ನು ಪ್ರದರ್ಶನ ಮಾಡಲಾಗಿದೆ. ತಕ್ಕಡಿಯಲ್ಲಿ ಒಂದು ಕಡೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾವಚಿತ್ರವನ್ನು ಹಾಕಲಾಗಿದ್ದು, ಇನ್ನೊಂದು ಕಡೆ ಧರ್ಮಸ್ಥಳ ವಿರುದ್ಧ ಬುರುಡೆ ಕಥೆ ಕಟ್ಟಿದ್ದ ಆರೋಪಿ ಮುಸುಕುಧಾರಿ ಸೇರಿ ಮೂವರ ಭಾವಚಿತ್ರವನ್ನು ಹಾಕಲಾಗಿತ್ತು.

ಬೆಳಗಾವಿ ನಗರದ ಜೈನ ಸಮುದಾಯದಿಂದ ಆಯೋಜಿಸಿದ್ದ ಮಹಾವೀರ ಜಯಂತಿಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ್, ಮೇಯರ್, ಉಪ ಮೇಯರ್ ಭಾಗಿಯಾಗಿದ್ದರು. ಈ ವೇಳೆ ಮಂಜುನಾಥ ಆಶೀರ್ವಾದದಿಂದ ಧರ್ಮಸ್ಥಳಕ್ಕೆ ಅಂಟಿದ್ದ ಕಳಂಕ ನಿವಾರಣೆಯಾಗಿದೆ ಎಂಬ ಸಂದೇಶ ರವಾನೆ ಮಾಡಲಾಗಿದೆ.

Edited By :
PublicNext

PublicNext

30/03/2026 08:26 pm

Cinque Terre

12.78 K

Cinque Terre

0

ಸಂಬಂಧಿತ ಸುದ್ದಿ