ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಶ್ರೀ ಮುರುಘೆಂದ್ರ ಶಿವಯೋಗಿಗಳ ಜಾತ್ರೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಹವಾ!

ಅಥಣಿ: ತಾಲ್ಲೂಕಿನ ಶ್ರೀ ಮುರುಘೆಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವ ಈ ಬಾರಿ ಭಕ್ತಿ ಜೊತೆ ಕ್ರಿಕೆಟ್ ಹುಮ್ಮಸ್ಸಿನ ಮಿಶ್ರಣವಾಗಿತ್ತು. ನಿನ್ನೆ ನಡೆದ ರಥೋತ್ಸವ ಮೆರವಣಿಗೆಯಲ್ಲಿ ರಾಯಲ್ ಚಾಲೆಂಜೆರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳು ವಿಶೇಷವಾಗಿ ಗಮನ ಸೆಳೆದರು.

ಕೈಯಲ್ಲಿ ಕಪ್ ಮಾದರಿ ಟ್ರೋಫಿ ಹಿಡಿದು, ಚಾಂಪಿಯನ್ ಬ್ಯಾನರ್‌ಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ ಅಭಿಮಾನಿಗಳು, ಕಪ್‌ನಿಂದ ಹೂ ಚೆಲ್ಲಿ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿದರು. 2025ರಲ್ಲಿ ಚಾಂಪಿಯನ್ ಆಗಿದ್ದ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮವನ್ನು ಜಾತ್ರೆಯಲ್ಲೇ ಮರುಕಳಿಸಿದಂತೆ ಕಂಡುಬಂತು.

“ಈ ವರ್ಷವೂ ಕಪ್ ನಮ್ಮದೇ ಆಗಲಿ” ಎಂದು ಸಿದ್ಧೇಶ್ವರ ದೇವರಲ್ಲಿ ಹರಕೆ ಹೊತ್ತ ಅಭಿಮಾನಿಗಳು ಘೋಷಣೆ ಕೂಗಿ ಸಂಭ್ರಮಿಸಿದರು. ಜಾತ್ರೆಯ ಮಧ್ಯೆ ಆರ್‌ಸಿಬಿ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದ್ದು, ಭಕ್ತಿ ಮತ್ತು ಕ್ರಿಕೆಟ್ ಪ್ರೀತಿ ಒಂದೇ ವೇದಿಕೆಯಲ್ಲಿ ಒಟ್ಟುಗೂಡಿದ ಅಪರೂಪದ ದೃಶ್ಯ ಕಂಡುಬಂತು.

Edited By :
PublicNext

PublicNext

05/04/2026 11:24 am

Cinque Terre

10.1 K

Cinque Terre

0

ಸಂಬಂಧಿತ ಸುದ್ದಿ