ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾಕಾಲೇಶ್ವರ ಸನ್ನಿಧಿಯಲ್ಲಿ 'ಭೂತ್ ಬಂಗ್ಲಾ' ಯಶಸ್ಸಿಗೆ ಅಕ್ಷಯ್ ವಿಶೇಷ ಪೂಜೆ

ಉಜ್ಜಯಿನಿ: ಬಾಲಿವುಡ್‌ ಖ್ಯಾತ ನಟ ಅಕ್ಷಯ್ ಕುಮಾರ್ ತಮ್ಮ ಅತ್ತೆ, ಹಿರಿಯ ನಟಿ ಡಿಂಪಲ್ ಕಪಾಡಿಯಾ ಅವರೊಂದಿಗೆ ಇಂದು ಮಧ್ಯಪ್ರದೇಶದ ವಿಶ್ವಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ಭೂತ್ ಬಂಗ್ಲಾ' (Bhooth Bangla) ಬಿಡುಗಡೆಗೂ ಮುನ್ನ ಮಹಾಕಾಲನ ಆಶೀರ್ವಾದ ಪಡೆಯಲು ಅಕ್ಷಯ್ ಕುಮಾರ್ ಆಗಮಿಸಿದ್ದರು. ಬೆಳಗಿನ ಜಾವ ನಡೆದ ಪವಿತ್ರ 'ಭಸ್ಮ ಆರತಿ'ಯಲ್ಲಿ ಭಾಗವಹಿಸಿದ ಅವರು, ಬಳಿಕ ನಂದಿಯ ಕಿವಿಯಲ್ಲಿ ತಮ್ಮ ಮನದಾಸೆಯನ್ನು ನಿವೇದಿಸಿಕೊಂಡರು.

ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಕ್ಷಯ್ ಕುಮಾರ್, "ಇಲ್ಲಿಗೆ ಬಂದಿರುವುದು ನನಗೆ ಅಪಾರ ಸಂತೋಷ ತಂದಿದೆ. ನಾನು ನನ್ನ ಕುಟುಂಬಕ್ಕಾಗಿ ಮಾತ್ರವಲ್ಲದೆ, ಇಡೀ ದೇಶದ ಏಳಿಗೆ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ್ದೇನೆ. ನಮ್ಮ ಭಾರತ ದೇಶವು ಸದಾ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿ ಎಂಬುದು ನನ್ನ ಆಶಯ" ಎಂದು ತಿಳಿಸಿದರು.

ಇನ್ನೂ ಅಕ್ಷಯ್ ಕುಮಾರ್ ಮತ್ತು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರು ಸುಮಾರು 14 ವರ್ಷಗಳ ನಂತರ 'ಭೂತ್ ಬಂಗ್ಲಾ' ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಬಿಡುಗಡೆಗೆ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

Edited By : Nirmala Aralikatti
PublicNext

PublicNext

01/04/2026 11:47 am

Cinque Terre

28.43 K

Cinque Terre

0