ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಕ್ತಿಯ ಪರಾಕಾಷ್ಠೆ : ಭಕ್ತನ ಮನೆಯಲ್ಲಿ ನೆಲೆಸಿದ ಚಿನ್ನ-ಬೆಳ್ಳಿ ಲೇಪಿತ ಆಂಜನೇಯ

ಗುಜರಾತ್‌ನ ಸೂರತ್‌ನಲ್ಲಿ ಹನುಮ ಜಯಂತಿಯ ಅಂಗವಾಗಿ ಭಕ್ತನೊಬ್ಬ ತನ್ನ ಅಪ್ರತಿಮ ಭಕ್ತಿಯನ್ನು ಪ್ರದರ್ಶಿಸಿದ್ದಾನೆ. ಸುಮಾರು 6.5 ಅಡಿ ಎತ್ತರದ, ಸಂಪೂರ್ಣ ಚಿನ್ನ ಮತ್ತು ಬೆಳ್ಳಿಯ ಲೇಪನವಿರುವ ಭವ್ಯ ಹನುಮಂತನ ವಿಗ್ರಹವನ್ನು ತನ್ನ ಮನೆಯಲ್ಲೇ ಪ್ರತಿಷ್ಠಾಪಿಸುವ ಮೂಲಕ ಸುದ್ದಿಯಾಗಿದ್ದಾನೆ. ಈ ಅಪೂರ್ವ ಕಾರ್ಯವು ಎಲ್ಲರ ಗಮನ ಸೆಳೆದಿದೆ.

ಹೌದು ಈ ಅದ್ದೂರಿ ವಿಗ್ರಹವು ನೂರಾರು ಕೆಜಿ ತೂಕವಿದ್ದು, ಇದಕ್ಕೆ ಬೆಳ್ಳಿಯ ಕವಚ ಮತ್ತು ಮನಮೋಹಕ ಚಿನ್ನದ ಲೇಪನವನ್ನು ಮಾಡಿಸಲಾಗಿದೆ. ಇದರ ಅಂದಾಜು ಮೌಲ್ಯ ಕೋಟಿಗಟ್ಟಲೆ ಎಂದು ಹೇಳಲಾಗುತ್ತಿದೆ. ವಿಗ್ರಹದ ಭವ್ಯತೆ ಮತ್ತು ಸೂಕ್ಷ್ಮ ಕೆತ್ತನೆಗಳು ನೋಡುಗರ ಕಣ್ಮನ ಸೆಳೆಯುವಂತಿವೆ. ರಾಜಸ್ಥಾನ ಮತ್ತು ಉದಯಪುರದ ನುರಿತ ಕುಶಲಕರ್ಮಿಗಳು ಸುಮಾರು 6 ತಿಂಗಳ ಕಾಲ ನಿರಂತರ ಶ್ರಮವಹಿಸಿ ಈ ಅದ್ಭುತ ವಿಗ್ರಹವನ್ನು ಸಿದ್ಧಪಡಿಸಿದ್ದಾರೆ.

ಹನುಮ ಜಯಂತಿಯ ಪವಿತ್ರ ಸಂದರ್ಭದಲ್ಲಿ ಈ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ನೆರೆಹೊರೆಯ ಭಕ್ತರಿಗೂ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೇವಲ ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ದೃಢ ಭಕ್ತಿಯಿದ್ದಲ್ಲಿ ಭಗವಂತ ಮನೆಯಲ್ಲೂ ನೆಲೆಸುತ್ತಾನೆ ಎಂಬುದಕ್ಕೆ ಸೂರತ್‌ನ ಈ ಭಕ್ತನ ಕಾರ್ಯವು ಉತ್ತಮ ನಿದರ್ಶನವಾಗಿದೆ.

Edited By : Nirmala Aralikatti
PublicNext

PublicNext

02/04/2026 06:01 pm

Cinque Terre

26.63 K

Cinque Terre

0

ಸಂಬಂಧಿತ ಸುದ್ದಿ