ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಮೂವರ ಮೇಲೆ ಮುಗಿಬಿದ್ದ ಶ್ವಾನದ ರೌದ್ರಾವತಾರ…! ಬೆಚ್ಚಿಬಿದ್ದ ನೆಟ್ಟಿಗರು..!

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಒಂದು ಭಯಾನಕ ವಿಡಿಯೋ ಭಾರೀ ಸಂಚಲನ ಮೂಡಿಸ್ತಾ ಇದೆ. ನಾಯಿಯೊಂದು ದಾರಿಹೋಕರ ಮೇಲೆ ಯಾವ ರೀತಿ ಅಟ್ಯಾಕ್ ಮಾಡಿದೆ ಅಂದ್ರೆ, ಈ ನಾಯಿಗೂ ಇವರಿಗೂ ಏನಾದ್ರೂ ಜನ್ಮಜನ್ಮಾಂತರದ ಹಗೆ ಇತ್ತಾ ಅನ್ನೋ ಅನುಮಾನ ಮೂಡುವಂತಿದೆ.

ಪುಷ್ಪರಾಜ್ ಶರ್ಮಾ ಅನ್ನೋರು ಹಂಚಿಕೊಂಡಿರೋ ಈ ವಿಡಿಯೋ ಈಗ ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ಈ ನಾಯಿ ಮಾತ್ರ ರಕ್ಕಸನಂತೆ ವರ್ತಿಸಿದೆ. ವಿಡಿಯೋದಲ್ಲಿ ಕಾಣುವಂತೆ ಆ ಶ್ವಾನ ಮೂವರ ಮೇಲೆ ಅತ್ಯಂತ ಅಪಾಯಕಾರಿ ರೀತಿಯಲ್ಲಿ ದಾಳಿ ಮಾಡಿದೆ.

ಒಬ್ಬರನ್ನ ಬಿಟ್ಟು ಮತ್ತೊಬ್ಬರ ಮೇಲೆ ಮುಗಿಬೀಳುತ್ತಿರುವ ಈ ಶ್ವಾನದ ರೌದ್ರಾವತಾರ ಕಂಡರೆ, ಇದು ಅಕ್ಷರಶಃ ಹಳೇ ದ್ವೇಷ ತೀರಿಸಿಕೊಳ್ಳಲು ಬಂದಂತಿದೆ ಅನ್ನೋದು ನೆಟ್ಟಿಗರ ಮಾತು.

ದಾರಿಯಲ್ಲಿ ಹೋಗುತ್ತಿದ್ದವರ ಮೇಲೆ ಯಾವುದೇ ಪ್ರಚೋದನೆ ಇಲ್ಲದಿದ್ದರೂ ಈ ನಾಯಿ ಅಟ್ಯಾಕ್ ಮಾಡಿದೆ. ದಾಳಿಯ ತೀವ್ರತೆಗೆ ಆ ಮೂವರು ಅಕ್ಷರಶಃ ಕಂಗೆಟ್ಟು ಹೋಗಿದ್ದಾರೆ. ಪ್ರಾಣಾಪಾಯದಿಂದ ಪಾರಾಗಲು ಅವರು ನಡೆಸಿದ ಹೋರಾಟ ಮೈನವಿರೇಳಿಸುವಂತಿದೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಬೀದಿ ನಾಯಿಗಳ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ಆತಂಕ ಶುರುವಾಗಿದೆ.

Edited By : Abhishek Kamoji
PublicNext

PublicNext

04/04/2026 02:57 pm

Cinque Terre

14.08 K

Cinque Terre

0

ಸಂಬಂಧಿತ ಸುದ್ದಿ