ಬೆಳಗಾವಿ: ಹಳೆಯ ವೈಷಮ್ಯಕ್ಕೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.
ಸಂಗನಗೌಡ ಬಸನಗೌಡ ಪಾಟೀಲ್ (50) ಕೊಲೆಯಾದ ವ್ಯಕ್ತಿ ಹಾಗೂ ಕೊಲೆ ಮಾಡಿದ ಆರೋಪಿಗಳ ನಡುವೆ ಕೆಲ ವರ್ಷಗಳಿಂದ ಜಗಳವಿತ್ತು. ಸಿದ್ದೇಶ್ವರ ಜಾತ್ರೆಯ ಸಂಭ್ರಮದ ನಡುವೆಯೇ ದ್ವೇಷ ಉಲ್ಬಣಗೊಂಡು ಕೊಲೆಯಲ್ಲಿ ಅಂತ್ಯವಾಗಿದೆ.
ನಿನ್ನೆ ರಾತ್ರಿ ಬೈಲಹೊಂಗಲ ತಾಲೂಕಿನ ಸಿದ್ಧೇಶ್ವರ ಜಾತ್ರೆಯ ವೇಳೆ ಮದ್ಯ ಸೇವಿಸಿ ಡ್ಯಾನ್ಸ್ ಮಾಡುತ್ತಾ ಬರುತ್ತಿದ್ದ ಸಂಗನಗೌಡನ ಮೇಲೆ 16 ಜನರ ಗುಂಪು ದಾಳಿ ಮಾಡಿದೆ. ರಾಡ್, ಕಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
02/04/2026 12:16 pm
LOADING...