ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬಳಕೆ ಆಗ್ತಿಲ್ಲ ಬಸ್ ನಿಲ್ದಾಣದ ಸುರಂಗ ಮಾರ್ಗ, ಏನ್ ಮಾಡ್ತಿದಾರೆ ಅಧಿಕಾರಿಗಳು..?

ಬೆಳಗಾವಿ: ಬೆಳಗಾವಿ ನಗರ ಹಾಗೂ ಕೇಂದ್ರ ಬಸ್ ನಿಲ್ದಾಣ ಹಾಗೂ ನಗರ ಬಸ್ ನಿಲ್ದಾಣಗಳ ಮಧ್ಯೆ ನಿರ್ಮಿಸಿರುವ ಅಂಡರ್ ಬ್ರಿಡ್ಜ್ ನಲ್ಲಿ ಅಸ್ವಚ್ಛತೆ, ಬೆಳಕಿನ ವ್ಯವಸ್ಥೆಯೂ ಇಲ್ಲದ ಕಾರಣ ಪ್ರಯಾಣಿಕರು ಆತಂಕದಲ್ಲೇ ಸಂಚರಿಸುವಂತಾಗಿದೆ.

ನಗರ ಬಸ್ ನಿಲ್ದಾಣದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸುಮಾರು 200 ಮೀಟರ್ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲದ ಕಾರಣ, ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ಸುರಂಗ ಮಾರ್ಗದಲ್ಲಿ ಬೆಳಕು ಬೇಕು. ಆದರೆ, ಇಲ್ಲಿ ಬೆಳಕಿನ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಹಗಲಿನಲ್ಲೂ ಓಡಾಡಲು ಮೊಬೈಲ್ ಟಾರ್ಚ್ ಹಿಡಿದು ಸಂಚರಿಸುವಂತಾಗಿದೆ.

ಇನ್ನು ರಾತ್ರಿ ಹೊತ್ತಲ್ಲಿ ಜನರು ಇಲ್ಲಿ ಹೋಗುವುದೇ ಇಲ್ಲ. ಹೀಗಾಗಿ ಸುರಂಗ ಮಾರ್ಗ ಇದ್ದೂ ಇಲ್ಲದಂತಾಗಿದೆ. ಸುರಂಗ ಮಾರ್ಗದಿಂದ ಮೇಲೆ ಬರಲು ಎರಡೂ ಕಡೆ ಲಿಫ್ಟ್ ಅಳವಡಿಸಿದ್ದರೂ ಇನ್ನೂ ಆರಂಭಗೊಂಡಿಲ್ಲ. ಆದ್ದರಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿಶೇಷಚೇತನರು ಮೆಟ್ಟಿಲು ಏರಿಳಿಯುವುದು ಅನಿವಾರ್ಯವಾಗಿದೆ.

ಒಟ್ಟಿನಲ್ಲಿ ಬೆಳಗಾವಿಯ ಸಾರಿಗೆ ಇಲಾಖೆಯ ಅಧಿಕಾರಿಗಳು ತೋರಿರುವ ನಿರ್ಲಕ್ಷ್ಯಕ್ಕೆ ಅಂಡರ್ ಬ್ರಿಡ್ಜ್ ಉಪಯೋಗಕ್ಕೆ ಬಾರದೆ ಹಾಳಾಗುತ್ತಿದ್ದು, ಇವರು ಕೆಲಸ ಮಾಡ್ತಾರಾ ಅಥವಾ ಕಚೇರಿಗೆ ಬಂದು ಹರಟೆ ಹೊಡೆದು ಮನೆಗೆ ಹೋಗ್ತಾರಾ ಎಂಬ ಅನುಮಾನ ಮೂಡುತ್ತಿದೆ.

ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By : Somashekar
PublicNext

PublicNext

04/04/2026 03:07 pm

Cinque Terre

7.37 K

Cinque Terre

0

ಸಂಬಂಧಿತ ಸುದ್ದಿ