ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹೆದ್ದಾರಿ ಮೇಲೆ ಪಲ್ಟಿ ಹೊಡೆದ ಸೇಬು ಹಣ್ಣು ಸಾಗಿಸುತ್ತಿದ್ದ ವಾಹನ

ಬೆಳಗಾವಿ: ಸೇಬು ಹಣ್ಣು ತುಂಬಿಕೊಂಡು ಮುಂಬೈಯಿಂದ ದಾವಣಗೆರೆಗೆ ಹೊರಟಿದ್ದ ಗುಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಬೆಳಗಾವಿ ನಗರದ ಗಾಂಧಿನಗದ ಬಳಿ ಇರುವ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ತಡ ರಾತ್ರಿ ಈ ಅವಘಡ ಸಂಭವಿಸಿದೆ. ಗುಡ್ಸ್ ವಾಹನ ಪಲ್ಟಿ ಆಗಿರುವ ಪರಿಣಾಮ ಲಕ್ಷಾಂತರ ಮೌಲ್ಯದ ಸೇಬು ಹಣ್ಣಿಗೆ ಹಾನಿಯಾಗಿದೆ.

ಅಪಘಾತದಲ್ಲಿ ಗುಡ್ಸ್ ವಾಹನ ಚಾಲಕ ಯಾವುದೇ ಹಾನಿಯಾಗಿಲ್ಲ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಬೆಳಗಾವಿ ನಗರದ ಉತ್ತರ ಸಂಚಾರ ಪೊಲೀಸ್ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ.

Edited By : Somashekar
PublicNext

PublicNext

02/04/2026 10:32 am

Cinque Terre

9.25 K

Cinque Terre

0

ಸಂಬಂಧಿತ ಸುದ್ದಿ