ಬೆಳಗಾವಿ: ಬೆಳಗಾವಿ ನಗರದಲ್ಲಿ ಸ್ಮಾರ್ಟಿ ಸಿಟಿ ಯೋಜನೆಯಡಿ ಬೀದಿಗಳ ಸೌಂದರ್ಯ ಹೆಚ್ಚಿಸಲು ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಅದೇ ಅಲಂಕಾರಿಕ ದೀಪಗಳು ಜನರ ಪ್ರಾಣಕ್ಕೆ ಕುತ್ತು ತರುವ ವಾತಾವರಣ ನಿರ್ಮಾಣವಾಗಿದೆ.
ಹೌದು.. ಬೆಳಗಾವಿ ನಗರದಲ್ಲಿ ಸ್ಮಾರ್ಟಿ ಸಿಟಿ ಯೋಜನೆಯಡಿ ಅನೇಕ ಬೀದಿಗಳಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಕೆ ಮಾಡಲಾಗಿದೆ. ಕಾಮಗಾರಿ ಮುಗಿದ ಬಳಿಕ ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರ ಕೂಡ ಆಗಿದೆ. ಆದರೆ ಮಹಾನಗರ ಪಾಲಿಕೆಗೆ ಹಸ್ತಾಂತರ ಆಗಿದ್ದೆ ತಡ, ಪಾಲಿಕೆ ಅಧಿಕಾರಿಗಳ ಬೆಜವಾಬ್ದಾರಿಗೆ ಅಲಂಕಾರಿಕ ದೀಪಗಳ ಕಂಬಗಳು ಬೀಳುವ ಸ್ಥಿತಿಗೆ ಬಂದು ತಲುಪಿದೆ.
ಬೆಳಗಾವಿ ನಗರದ ಕೋಟೆ ಕೆರೆ ಬಳಿ ಈ ರೀತಿ ವಿದ್ಯುತ್ ಕಂಬಗಳು ಒಂದು ಕಡೆ ವಾಲಿ ಬೀಳುವ ಹಂತದಲ್ಲಿದೆ. ಮತ್ತೊಂದೆಡೆ ಕೆಲ ಖಾಸಗಿ ವ್ಯಕ್ತಿಗಳು ಅಲಂಕಾರಿಕ ಕಂಬಗಳನ್ನೇ ಅತಿಕ್ರಮಣ ಮಾಡಿಕೊಂಡಿದ್ದಾರೆ. ಜೊತೆ ನಗರದ ಬಹುತೇಕ ಕಡೆ ಅಲಂಕಾರಿಕ ದೀಪಗಳಿಗೆ ಗ್ರಹಣ ಹಿಡಿದಿದ್ದು, ರಾತ್ರಿ ನಗರದ ಸೌಂದರ್ಯ ಹೆಚ್ಚಿಸುವ ಬದಲು ನಗರವನ್ನು ಕತ್ತಲೆಯಲ್ಲಿ ದೂಡಿದೆ. ಅಷ್ಟೆಲ್ಲ ಅನಾಹುತಗಳು ಆದರೂ ಮಹಾನಗರ ಪಾಲಿಕೆಯ ಅಭಿಯಂತರರು ಮಾತ್ರ ನಮಗೆ ಏನು ಗೊತ್ತೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ದೊಡ್ಡ ಅನಾಹುತ ಆಗುವ ಮುಂಚೆ ಸಮಸ್ಯೆಗೆ ಪರಿಹಾರ ನೀಡುತ್ತಾರೆ..? ಅಥವಾ ತಮ್ಮ ಅಸಡ್ಡೆ ಮುಂದುವರಿಸುತ್ತಾರಾ ಕಾದು ನೋಡಬೇಕು.
ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
03/04/2026 04:53 pm
LOADING...