ಬೆಳಗಾವಿ: ಬೆಳಗಾವಿಯಲ್ಲಿ ಅಡುಗೆ ಅನಿಲ ಸಮಸ್ಯೆ ಉಂಟಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಹೋಟೆಲ್ ಮಾಲೀಕರು ಬೆಳಗಾವಿಯಲ್ಲೇ ತಯಾರಾಗುವ ಬಯೋಮಾಸ್ ಒಲೆಗಳ ಮೊರೆ ಹೋಗಿದ್ದಾರೆ.
ಬೆಳಗಾವಿ ನಗರದಲ್ಲಿ 350ಕ್ಕೂ ಅಧಿಕ ಹೋಟೆಲ್, ಕ್ಯಾಂಟಿನ್ ಮತ್ತು ರೆಸ್ಟೋರೆಂಟ್ ಗಳಿವೆ. ಪ್ರತಿನಿತ್ಯ 1600 ಕಮರ್ಷಿಯಲ್ ಸಿಲಿಂಡರ್ ಬೇಡಿಕೆ ಇದೆ. ಸದ್ಯ ಪೂರೈಕೆ ಆಗುತ್ತಿರುವುದು 600 ಸಿಲಿಂಡರ್ ಮಾತ್ರ. ಇದರ ಪರಿಣಾಮ ಅನೇಕ ಹೋಟೆಲ್ ಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ. ಇದರಿಂದ ಪಾರಾಗಲು ಹೋಟೆಲ್ ಮಾಲೀಕರು ಅದೇ ಬಯೋಮಾಸ್ ಒಲೆಗಳ ಕಡೆ ಮುಖ ಮಾಡಿದ್ದಾರೆ. ಈ ಮೊದಲು ಸುಮಾರು 30 ಹೋಟೆಲ್, ರೆಸ್ಟೋರೆಂಟ್ ಮಾತ್ರ ಉಪಯೋಗಿಸುತ್ತಿದ್ದ ಜೈವಿಕ ಇಂಧನ ಒಲೆಗಳನ್ನು, ಸದ್ಯ 180ಕ್ಕೂ ಅಧಿಕ ಹೋಟೆಲ್ ಗಳಲ್ಲಿ ಬಳಸುತ್ತಿದೆ.
ಟಾಟಾ ಎನರ್ಜಿ ರಿಸೋರ್ಸ್ ಇನ್‌ಸ್ಟಿಟ್ಯೂಟ್ ದೆಹಲಿ(TERI), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಇವರ ಸಹಯೋಗದಲ್ಲಿ ಈ ಬಯೋಮಾಸ್ ಒಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಒಲೆಗಳನ್ನು ಬೆಳಗಾವಿಯ ಕೈಗಾರಿಕೋದ್ಯಮಿ ಕಳೆದ 25 ವರ್ಷಗಳಿಂದ ಮಾರಾಟ ಮಾಡುತ್ತಿದ್ದಾರೆ.
ಕಡಿಮೆ ಕಟ್ಟಿಗೆ, ಕೃಷಿ ತ್ಯಾಜ್ಯ ಬಳಸಿ ಇದನ್ನು ಉರಿಸಬಹುದಾಗಿದೆ. ಸಾಮಾನ್ಯ ಕಟ್ಟಿಗೆ ಒಲೆ ಶೇ.5ರಷ್ಟು ಬಳಕೆ ಆಗುತ್ತಿತ್ತು. ಆದರೆ, ಇದು ಶೇ.75ರಷ್ಟು ಬಳಕೆ ಆಗುತ್ತದೆ. ಇನ್ನು 100 ರೂ. ಗ್ಯಾಸ್ ಖರ್ಚಾದರೆ ಇದರ ಖರ್ಚು ಕೇವಲ 20 ರೂ. ಇದು ಪರಿಸರ ಸ್ನೇಹಿ. ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಬಯೋ ಮಾಸ್ ಇಂಧನ ಗುರುತಿಸಿ ಅದನ್ನು ಬಳಸಲು ಹೆಚ್ಚು ಪ್ರಚಾರ ಮಾಡುತ್ತಿದೆ. ಇಲ್ಲಿಯವರೆಗೆ 20 ಸಾವಿರ ನೀರು ಕಾಯಿಸುವ ಒಲೆ, 20 ಸಾವಿರ ಅಡುಗೆ ಒಲೆ ಮಾರಾಟ ಮಾಡಲಾಗಿದೆ.
ಪ್ರಲ್ಹದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
01/04/2026 02:07 pm
LOADING...