ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪಾಲಿಕೆಯಿಂದ ವಿಶ್ವ ಜಲದಿನ ಆಚರಣೆ

ಬೆಳಗಾವಿ: ಬೆಳಗಾವಿ ನರಗುಂದಕರ ಭಾವಿ ವೃತ್ತದಲ್ಲಿ ಮಹಾನಗರ ಪಾಲಿಕೆಯಿಂದ ವಿಶ್ವ ಜಲದಿನ ಹಾಗೂ ಪ್ಲಾಸ್ಟಿಕ್ ಮುಕ್ತ ಅರಿವು ಮತ್ತು ಕ್ಲಾಥ್ ಬ್ಯಾಗ್ ವೆಡ್ಡಿಂಗ್ ಯಂತ್ರ ಉದ್ಘಾಟನೆ ಜರುಗಿತು.

ಈ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ಅವರು ಉದ್ಘಾಟಿಸಿದರು.

ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಮೈಕ್ರೋ ಪ್ಲಾಸ್ಟಿಕ್ ಮಣ್ಣಿನ ಮೂಲಕ ಅಥವಾ ನೀರಿನ ಮೂಲಕ ಬಂದಾಗ ಕ್ಯಾನ್ಸರ್, ಸಂತಾನ ಹೀನತೆ ಬರುತ್ತದೆ. ಆದ್ದರಿಂದ ನಾವು ಪ್ಲಾಸ್ಟಿಕ್ ಬಳಕೆ ಮಾಡದೆ ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಬಳಸಬಾರದು ಎಂದರು.

ಮೇಯ‌ರ್ ಪ್ರೀತಿ ಕಾಮಕಾರ, ಉಪಮೇಯರ್ ಹನುಮಂತ ಕೊಂಗಾಲಿ, ಮಾಜಿ ಮೇಯರ್ ಮಂಗೇಶ್ ಪವಾ‌ರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : Vinayak Patil
Kshetra Samachara

Kshetra Samachara

02/04/2026 09:18 pm

Cinque Terre

21.48 K

Cinque Terre

0

ಸಂಬಂಧಿತ ಸುದ್ದಿ